ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪೋಲೀಸ್ ತಂಡದಿಂದ ವಿವಿಧೆಡೆ ಬಿಗಿ ತಪಾಸಣೆ ಆರಂಭಿಸಲಾಗಿದೆ.
ಕೋವಿಡ್ ರೋಗ ಖಚಿತತೆ( ಟಿ.ಪಿ.ಆರ್.) ಅತ್ಯಧಿಕಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶ ಪ್ರಕಾರ ಜಿಲ್ಲೆಯಲ್ಲಿ ಕಟ್ಟುನಿಟ್ಟು ಇನ್ನಷ್ಟು ಬಿಗಿಗೊಳಿಸುವ ಪ್ರಕ್ರಿಯೆಯ ಅಂಗವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಅಗತ್ಯವಿಲ್ಲದೆ ಮನೆಗಳಿಂದ ಹೊರಬಂದು ಅಡ್ಡಾಡುವವರನ್ನು ತಡೆಯುವ, ನಿಗದಿ ಪಡಿಸಲಾದ ಅವಧಿಗಿಂತ ಅಧಿಕ ವೇಳೆ ತೆರೆದು ಕಾರ್ಯಾಚರಿಸುವ ಅಂಗಡಿಗಳನ್ನು ಮುಚ್ಚಿಸುವ ಕ್ರಮವನ್ನು ಪೆÇಲೀಸರು ಕೈಗೊಳ್ಳುತ್ತಿದ್ದಾರೆ.
ಈ ಕ್ರಮಗಳ ಅಂಗವಾಗಿ ಕಾಸರಗೋಡು ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ಮಂಜೇಶ್ವರ, ಕುಂಬಳೆ, ಕಾಸರಗೋಡು, ವಿದ್ಯಾನಗರ, ಬದಿಯಡ್ಕ ಸಿ.ಐ.ಗಳ ಸಹಿತ ಪೆÇಲೀಸರ ತಂಡ ತಪಾಸಣೆ ನಡೆಸುತ್ತಿದೆ. ಆದೇಶ ಉಲ್ಲಂಘನೆ ಸಂಬಂಧ ಅನೇಕ ಕೇಸುಗಳನ್ನು ಈಗಾಗಲೇ ದಾಖಲಿಸಲಾಗಿದೆ. ಕೋವಿಡ್ ಕಟ್ಟುನಿಟ್ಟು ಉಲ್ಲಂಘನೆ, ಮಾಸ್ಕ್ ಧರಿಸದೇ ಅಡ್ಡಾಡಿದ ಪ್ರಕರಣಗಳಿಗೆ ಸಂಬಂಧಿಸಿ 450 ಕೇಸುಗಳನ್ನು ದಾಖಲಿಸಲಾಗಿದ್ದು, 7500 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲೂ ಪೋಲೀಸ್ ಕ್ರಮ ಮುಂದುವರಿಯಲಿದೆ.





