ಕಾಸರಗೋಡು: ಕಲಿಕಾ ಕೊಠಡಿ ನಿರ್ಮಾಣ ಸಂಬಂಧ ಆರ್ಥಿಕ ಸಹಾಯಕ್ಕೆ ಅರ್ಜಿ ಕೋರಲಾಗಿದೆ.
ಕಾಸರಗೋಡು ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ ವ್ಯಾಪ್ತಿಯ 6 ಗ್ರಾಮ ಪಂಚಾಯತ್ ವ್ಯಾಪ್ತಿಯ, ಕಾಸರಗೋಡು ನಗರಸಭೆ ವ್ಯಾಪ್ತಿಯ ಶಾಶ್ವತ ನಿವಾಸಿಗಳಾದ 8 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಂದ ಅರ್ಜಿ ಕೋರಲಾಗಿದೆ. ಅರ್ಜಿದಾರರು ಸರಕಾರಿ, ಅನುದಾನಿತ, ವಿಶೇಷ, ತಾಂತ್ರಿಕ ಶಾಲೆಯ ವಿದ್ಯಾರ್ಥಿಯಾಗಿರಬೇಕು. ಕೌಟುಂಬಿಕ ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂ. ಸದ್ರಿ ವಾಸಿಸುತ್ತಿರುವ ಮನೆಯ ವಿಸ್ತೀರ್ಣ 800 ಚದರ ಅಡಿ ಮೀರಬಾರದು. ಆಸಕ್ತರು ಜಾತಿ, ಆದಾಯ, ಶಾಲೆಯ ಮುಖ್ಯಸ್ಥರ ಸರ್ಟಿಫಿಕೆಟ್, ಮನೆಯ ವಿಸ್ತೀರ್ಣ, ಮನೆಯ ಮಾಲೀಕತ್ವ ಸಂಬಂಧ ಅರ್ಹತಾಪತ್ರ ಸಹಿತ ಅರ್ಜಿಯನ್ನು ಜು.23ರ ಮುಂಚಿತವಾಗಿ ಕಾಸರಗೋಡು ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಸಲ್ಲಿಸಬೇಕು. ದೂರವಾಣಿ ನಂಬ್ರ: 8547630172.




