ಕಾಸರಗೋಡು: ಆನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಕೋವಿಡ್ ವಾಕ್ಸಿನೇಷನ್ ಡ್ರೈವ್ ಏರ್ಪಡಿಸಲಾಗಿದೆ.
ಇ-ಹೆಲ್ತ್ ಮೂಲಕ ನೋಂದಣಿ ನಡೆಸಿರುವ ಆನಿವಾಸಿಗರು, ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವವರು ಮೊದಲಾದವರಿಗಾಗಿ ಜು.10,11ರಂದು ಕೋವಿಡ್ ಲಸಿಕೆಗಾಗಿ ವಿಶೇಷ ಶಿಬಿರಗಳನ್ನು ನಡೆಸಲಾಗುವುದು.
ಕಾಸರಗೋಡು ಜಿಲ್ಲೆಯ 6 ಕೇಂದ್ರಗಳಲ್ಲಿ ವಿಶೇಷ ಲಸಿಕೆ ಡ್ರೈವ್ ನಡೆಸಲಾಗುವುದು. ಈ ಕೇಂದ್ರಗಳನ್ನು ಈ ಕೆಳಗೆ ತಿಳಿಸಲಾಗಿದೆ
ತ್ರಿಕರಿಪುರ ತಾಲೂಕು ಆಸ್ಪತ್ರೆ
ಕಾಞಂಗಾಡು ಐ.ಎಂ.ಎ.ಸಭಾಂಗಣ
ನೀಲೇಶ್ವರ ತಾಲೂಕು ಆಸ್ಪತ್ರೆ
ಕಾಸರಗೋಡು ಪುರಭವನ
ಹೊಸಂಗಡಿ ವ್ಯಾಪಾರಭವನ
ಪೂಡಂಕಲ್ಲು ತಾಲೂಕು ಆಸ್ಪತ್ರೆ
ಇ-ಹೆಲ್ತ್ ಮೂಲಕ ನೋಂದಣಿ ನಡೆಸಿರುವ ಪ್ರವಾಸಿಗರಿಗೆ ಹಾಜರಾಗಬೇಕಾದ ಕೇಂದ್ರದ ಬಗ್ಗೆ ಸಂದೇಶ ನೋಂದಣಿ ನಡೆಸಿರುವ ಮೊಬೈಲ್ ನಂಬ್ರಕ್ಕೆ ಲಭಿಸಲಿದೆ.
ಉಡುಂಬುಂತಲ ಕುಟುಂಬ ಆರೋಗ್ಯ ಕೇಂದ್ರ ಲಸಿಕೆ ನೀಡಿಕೆ ಕೇಂದ್ರವಾಗಿ ಲಭಿಸಿದವರು ತ್ರಿಕರಿಪುರ ತಾಲೂಕು ಆಸ್ಪತ್ರೆಗೆ, ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರ ಲಸಿಕೆ ನೀಡಿಕೆ ಕೇಂದ್ರವಾಗಿ ಲಭಿಸಿದವರು ಕಾಞಂಗಾಡು ಐ.ಎಂ.ಎ.ಸಭಾಂಗಣ, ಕಾಸರಗೋಡು ಜನರಲ್ ಆಸ್ಪತ್ರೆ ಲಸಿಕೆ ಕೇಂದ್ರವಾಗಿ ಲಭಿಸಿರುವವರು ಕಾಸರಗೋಡು ಪುರಭವನ, ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ ಲಸಿಕೆ ಕೇಂದ್ರವಾಗಿ ಲಭಿಸಿರುವವರು ಹೊಸಂಗಡಿ ವ್ಯಾಪಾರಭವನಕ್ಕೆ ಹಾಜರಾಗಬೇಕು. ನೋಂದಣಿ ಸಮಯದಲ್ಲಿ ಅಪ್ ಲೋಡ್ ನಡೆಸಿರುವ ದಾಖಲೆಗಳ ನಕಲುಗಳನ್ನು ಲಸಿಕೆ ಕೇಂದ್ರಗಳ ಕೌಂಟರ್ ನಲ್ಲಿ ಹಾಜರುಪಡಿಸಬೇಕು.





