ಮಂಜೇಶ್ವರ: ವರದಕ್ಷಿಣೆ ತಡೆ ಕಾಯಿದೆ ಮತ್ತು ಮಹಿಳಾ ಸಂರಕ್ಷಣೆ ಎಂಬ ವಿಷಯಲ್ಲಿ ವೆಬಿನಾರ್ ಜರುಗಿತು.
ುಹಿಳಾ-ಶಿಶು ಸಂರಕ್ಷಣೆ ಇಲಾಖೆ, ಜಿಲ್ಲಾ ಮಹಿಳಾ-ಶಿಶು ಅಭಿವೃದ್ಧಿ ಕಚೇರಿ, ಕಾಸರಗೋಡು ತಾಲೂಕು ಲೀಗಲ್ ಸರ್ವೇಸ್ ಸಮಿತಿ, ಜಿಲ್ಲಾ ಐ.ಸಿ.ಡಿ.ಎಸ್. ಯೋಜನಾ ಕಚೇರಿ, ಮಹಿಳಾ ಶಕ್ತಿ ಕೇಂದ್ರ, ಐ.ಸಿ.ಡಿ.ಎಸ್. ಮಂಜೇಶ್ವರ, ವರ್ಕಾಡಿ ಗ್ರಾಮ ಪಂಚಾಯತಿ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ವೆಬಿನಾರ್ ಉದ್ಘಾಟಿಸಿದರು. ಎಂ.ಸಿ.ಟಿ. ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಕೆ.ಪಿ.ಸುನಿತಾ ಪ್ರಧಾನ ಭಾಷಣ ಮಾಡಿದರು. ಐ.ಸಿ.ಡಿ.ಎಸ್. ಮಂಜೇಶ್ವರ ಮೇಲ್ವಿಚಾರಕಿ ಷೀನಾ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮಂತೇರೊ, ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ವಿಠಲ ಎಂ. ಉಪನ್ಯಾಸ ನೀಡಿದರು.




