ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ 4ನೇ ವಾರ್ಡು ಏತಡ್ಕದಲ್ಲಿ ಮೃಗಾಸ್ಪತ್ರೆಯ ಸಬ್‍ಸೆಂಟರ್‍ನ್ನು ಸ್ಥಾಪಿಸಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರವೀಂದ್ರ ರೈಯವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೆÇಸಳಿಗೆಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಹಿಂದೆ ಮೃಗಾಸ್ಪತ್ರೆಯ ಪ್ರ`Áನ ಕೇಂದವ್ರು ಏತಡ್ಕದಲ್ಲಿ ಕಾರ್ಯಾಚರಿಸುತ್ತಿದ್ದು 2012 ರಲ್ಲಿ ಇದನ್ನು ಯುಡಿಎಫ್ ಆಡಳಿತದ ಸಂದರ್ಭದಲ್ಲಿ ಮಾರ್ಪನಡ್ಕಕ್ಕೆ ಸ್ಥಳಾಂತರಿಸಲಾಗಿತ್ತು. ಇದಕ್ಕೆ ಬಿಜೆಪಿ ಮತ್ತು ಏತಡ್ಕ ಪ್ರದೇಶದ ಜನರು ತೀವ್ರ ಪ್ರತಿಭಟನೆಯನ್ನು ನಡೆದ್ದರು. ಆ ಸಮಯದಲ್ಲಿ ಏತಡ್ಕಕ್ಕೆ ಆದಷ್ಟು ಬೇಗ ಒಂದು ಸಬ್ ಸೆಂಟರನ್ನು ನೀಡುವುದಾಗಿ ಅಂದಿನ ಯುಡಿಎಫ್ ಆಡಳಿತ ಸಮಿತಿ ಹೇಳಿಕೆಯನ್ನು ನೀಡಿತ್ತು. ಇದುವರೆಗೆ ಅದರ ಬಗ್ಗೆ ಯಾವುದೇ ಕಾಳಜಿ ವಹಿಸದಿರುವ ಕಾರಣ ಅದನ್ನು ಕೂಡಲೇ ಸ್ಥಾಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು. ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಎಸ್ ಸಿ ಮೋರ್ಚಾ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ರಘು ಮಾಚವು, ಜನಪ್ರತಿನಿಗಳಾದ ಯಶೋದಾ, ಸುಂದರ ಮವ್ವಾರು, ಕೃಷ್ಣಶರ್ಮ, ಮೀನಾಕ್ಷಿ ಎಸ್ ಮೊದಲಾದವರು ಜೊತೆಗಿದ್ದರು.





