ಕಾಸರಗೋಡು: ಕೋವಿಡ್ ಸಂಕಷ್ಟದ ಕಾಲಾವಧಿಯಲ್ಲಿ ಪಿಂಚಣಿ ಹಣವನ್ನೂ ನೀಡದೆ, ಸರ್ಕಾರ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರನ್ನು ಸಮಸ್ಯೆಯ ಕೂಪಕ್ಕೆ ತಳ್ಳಿರುವುದಾಗಿ ಸಾಮಾಜಿಕ ಹೋರಾಟಗಾರ, ಡಾ. ಅಂಬಿಕಾ ಸುತನ್ ಮಾಙËಡ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ 'ಸಂತ್ರಸ್ತರೊಂದಿಗೆ'ಎಂಬ ಸಮಾವೇಶದಲ್ಲಿ ಮಾತನಾಡಿದರು.
ಕರೊನಾ ಸಂದಿಗ್ಧಾವಸ್ಥೆಯ ಕಾಲಘಟ್ಟದಲ್ಲಿ ಎಂಸೋಡಲ್ಫಾನ್ ದುಷ್ಪರಿಣಾಮಪೀಡಿತರಿಗೆ ಅಗತ್ಯ ಚಿಕಿತ್ಸೆಯೂ ಲಭ್ಯವಾಗುತ್ತಿಲ್ಲ. ಸಂvತ್ರಸ್ತರ ಸಮಸ್ಯೆಗಳನ್ನು ಸರ್ಕಾರ ಕಾಣದಂತೆ ವರ್ತಿಸುತ್ತಿರುವುದು ಸಮಂಜಸವಲ್ಲ ಎಂದು ತಿಳಿಸಿದರು.
ಡಾ. ಡಿ.ಸುರೇಂದ್ರನಾಥ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನಾಡಿನ ಸಮಸ್ತ ಜನತೆ ಒಗ್ಗಟ್ಟಿನಿಂದ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ವಕೀಲ ಟಿ.ವಿ ರಾಜೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಪಿ.ಕೆ ಪೊದುವಾಳ್, ಮಧುರಾಜ್, ಸೀತಾದೇವಿ ಕಾರ್ಯಾಡ್, ಸರಳಾ ಪಯ್ಯನ್ನೂರ್, ಶ್ರೀನಾಥ್‍ಶಶಿ, ಅಬ್ದುಲ್ ಖಾದರ್ ಚಟ್ಟಂಚಾಲ್ ಮುಂತಾದವರು ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಗೋವಿಂದನ್ ಕಯ್ಯೂರ್ ವಂದಿಸಿದರು.





