ಕಾಸರಗೋಡು: ಪ್ರಧಾನಮಂತ್ರಿ ಕಿಸಾನ್‍ಸಮ್ಮಾನ್ ನಿಧಿ ಎಲ್ಲ ಕೃಷಿಕರಿಗೂ ಲಭ್ಯವಾಗುವಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಕೇರಳದ ಕೃಷ್ಯುತ್ಪನ್ನಗಳಿಗೆ ಘೋಷಿಸಿರುವ ಬೆಂಬಲ ಬೆಲೆ ತಕ್ಷಣ ನೀಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಬಿಜೆಪಿ ಕಾಸರಗೋಡು ನಗರಸಮಿತಿ ಕಾಸರಗೋಡು ಕರಂದಕ್ಕಾಡಿನ ಬೀಜೋತ್ಪಾದನಾ ಕೇಂದ್ರದ ಎದುರು ಶುಕ್ರವಾರ ಧರಣಿ ನಡೆಸಿತು.
ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಕೆ.ವಿ ವೇಣುಗೋಪಾಲ್ ಉದ್ಘಾಟಿಸಿದರು. ನಗರಸಭಾ ಸಮಿತಿ ಸದಸ್ಯ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರವೀಂದ್ರ ಪೂಜಾರಿ, ಎ.ಕೇಶವ, ಎಂ. ಉಮಾ, ಅರುಣ್‍ಕುಮಾರ್ ಶೆಟ್ಟಿ, ಸಂತೋಷ್ ಭಂಡಾರಿ, ವೆಂಕಟ್ರಮಣ ಹೊಳ್ಳ, ದುಗ್ಗಪ್ಪ, ಮಹಾಬಲ ರೈ ಉಪಸ್ಥಿತರಿದ್ದರು. ನಗರಸಭಾ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ್ ಜಿ. ಸ್ವಾಗತಿಸಿದರು.




