ಕೊಚ್ಚಿ: ರಾಜ್ಯದಲ್ಲಿ ಬಿವರೇಜ್ ಮಳಿಗೆಗಳ ಮೂಲಸೌಕರ್ಯಗಳ ಲೆಕ್ಕಪರಿಶೋಧನೆ ನಡೆಸಲು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇರಳದಲ್ಲಿ ಬಹಳ ಕಡಿಮೆ ಮದ್ಯದಂಗಡಿಗಳಿವೆ. ನೆರೆಯ ರಾಜ್ಯಗಳಲ್ಲಿ ಸಾಕಷ್ಟು ಮದ್ಯದಂಗಡಿಗಳಿವೆ ಎಂದು ನ್ಯಾಯಾಲಯ ಬೊಟ್ಟುಮಾಡಿದೆ.
ನೆರೆಯ ರಾಜ್ಯಗಳಲ್ಲಿ 2,000 ಮದ್ಯದಂಗಡಿಗಳಿದ್ದರೆ, ಕೇರಳದಲ್ಲಿ ಕೇವಲ 300 ಮಳಿಗೆಗಳಿವೆ. ಮಾಹೆಯ ಸಣ್ಣ ಪ್ರದೇಶದಲ್ಲಿ ಹೆಚ್ಚು ಮದ್ಯದಂಗಡಿಗಳಿವೆ. ಮದ್ಯದಂಗಡಿಗಳ ಕೊರತೆಯ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಯಾವುದೇ ಕ್ರಮ ಕೈಗೊಳ್ಳಬಾರದೇಕೆ ಎಂದು ಹೈಕೋರ್ಟ್ ಕೇಳಿದೆ.
ರಾಜ್ಯದ ಬಿವರೇಜ್ ಮಳಿಗೆಗಳಲ್ಲಿನ ದಟ್ಟಣೆಗೆ ಸಂಬಂಧಿಸಿದಂತೆ ಹಲವಾರು ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ಹೈಕೋರ್ಟ್‍ನಲ್ಲಿ ದಾಖಲಾಗಿದೆ. ನ್ಯಾಯಾಲಯವು ಸ್ವಯಂಪ್ರೇರಣೆಯಿಂದ ಈ ವಿಷಯವನ್ನು ಶುಕ್ರವಾರ ಕೈಗೆತ್ತಿಕೊಂಡಿತು. ಅಬಕಾರಿ ಆಯುಕ್ತರು ಮತ್ತು ಇತರರು ನ್ಯಾಯಾಲಯದಲ್ಲಿ ವಿವರಣೆ ನೀಡಿದ್ದರು. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಬೆವ್ಕೊ ಕೈಗೊಂಡ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಹೆಚ್ಚಿನ ದಟ್ಟಣೆ ಮತ್ತು ಗಂಟೆಗಟ್ಟಲೆ ಸರತಿಯ ಕಾರಣ ಹೈಕೋರ್ಟ್ ಆವರಣದಲ್ಲಿನ ಔಟ್‍ಲೆಟ್ ಮತ್ತು ತ್ರಿಶೂರ್ ಕುರುಪ್ಪಂ ರಸ್ತೆಯ ಬಿವರೇಜ್ ಔಟ್‍ಲೆಟ್ ಮುಚ್ಚಲಾಗಿದೆ ಎಂದು ಬೆವ್ಕೊ ನ್ಯಾಯಾಲಯಕ್ಕೆ ತಿಳಿಸಿದೆ. ರಾಜ್ಯದ ಬಿವರೇಜ್ ಮಳಿಗೆಗಳಲ್ಲಿನ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಆಯುಕ್ತರು ನ್ಯಾಯಾಲಯಕ್ಕೆ ತಿಳಿಸಿದರು.
ಏತನ್ಮಧ್ಯೆ, ಹೈಕೋರ್ಟ್ ಬಾರ್ ಗಳಲ್ಲಿನ ಜನಸಂದಣಿಯ ಕುರಿತು ರಾಜ್ಯ ಸರ್ಕಾರಕ್ಕೆ ಕಠಿಣ ಟೀಕೆ ವ್ಯಕ್ತಪಡಿಸಿತು. ದೇಶದ ಮೂರನೇ ಒಂದು ಭಾಗದಷ್ಟು ಕೊರೋನಾ ರೋಗಿಗಳು ಕೇರಳದಲ್ಲಿದ್ದರೂ ಮದ್ಯದಂಗಡಿಯ ಮುಂದೆ ಇರುವ ದಟ್ಟಣೆಯನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಆರೋಪಿಸಿದೆ.





