HEALTH TIPS

ಮಳೆಗಾಲದಲ್ಲಿ ಆರೋಗ್ಯ ಹಾಳಾಗಬಾರದೆಂದರೆ ಈ ಆಹಾರಗಳಿಂದ ದೂರವಿರಿ

             ಸುಡುವ ಶಾಖದಿಂದ ಮುಕ್ತಿ ಪಡೆಯಲು ಹೆಚ್ಚಿನ ಜನರು ಮಳೆಗಾಲಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಈ ಋತುವಿನಲ್ಲಿ, ಆರೋಗ್ಯದ ಬಗ್ಗೆ ಸ್ವಲ್ಪ ಅಜಾಗರೂಕತೆಯಿಂದ ಇದ್ದರೂ ನೀವು ವೈರಲ್ ಸೋಂಕು, ಶೀತ ಮತ್ತು ಜ್ವರ ಮುಂತಾದ ಕಾಯಿಲೆಗಳಿಗೆ ಬಲಿಯಾಗಬಹುದು. ಸದ್ಯ ಇರುವ ಕೊರೊನಾ ಆರ್ಭಟವೇ ಸಹಿಸಿಕೊಳ್ಳಲಾಗುತ್ತಿಲ್ಲ, ಇದರ ಮಧ್ಯೆ ಮಳೆಗಾಲದ ಸಮಸ್ಯೆಗಳು. ಆದ್ದರಿಂದ ಆರೋಗ್ಯ ಕಾಪಾಡಿಕೊಂಡು ಮಾನ್ಸೂನ್ ಆನಂದಿಸಲು, ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ.


           ಮಳೆಗಾಲದಲ್ಲಿ ಆದಷ್ಟು ದೂರವಿಡಬೇಕಾದ ಆಹಾರ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ;

         ಎಣ್ಣೆಯುಕ್ತ ಆಹಾರ: ಜನರು ಮಳೆಯನ್ನು ಆನಂದಿಸಲು ತಮ್ಮ ಮನೆಗಳಲ್ಲಿ ಚಹಾದೊಂದಿಗೆ ಪಕೋಡ, ಸಮೋಸಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಋತುವಿನಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಎಣ್ಣೆಯುಕ್ತ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಒಬ್ಬ ವ್ಯಕ್ತಿಯು ಅತಿಸಾರ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿನ ತೊಂದರೆಗಳಿಗೆ ಒಳಗಾಗುತ್ತಾನೆ. ಅಷ್ಟೇ ಅಲ್ಲ, ಮೊಡವೆ ಸಮಸ್ಯೆ ಇರುವವರು ಇದರಿಂದ ದೂರವಿರುವುದು ಉತ್ತಮ.
                ಸೊಪ್ಪುಗಳು: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಋತುವಿನಲ್ಲಿ, ಸೊಪ್ಪು ತರಕಾರಿಗಳಲ್ಲಿ ಕೀಟಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಅದನ್ನೇ ನಾವು ತಿಂದರೆ ಅತಿಸಾರ, ನಿರ್ಜಲೀಕರಣ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ತುತ್ತಾಗಬಹುದು. ಆದ್ದರಿಂದ ಮಳೆಗಾಲದಲ್ಲಿ ಪಾಲಕ್, ಮೆಂತ್ಯ, ಹಸಿರು ಸೊಪ್ಪು, ಅಣಬೆಗಳು, ಕೋಸುಗಡ್ಡೆ, ಎಲೆಕೋಸು ಮುಂತಾದ ತರಕಾರಿಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ.


              ಸಲಾಡ್: ಈ ವಿಷಯ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿಜ. ಮಳೆಗಾಲದಲ್ಲಿ ಸಲಾಡ್ ತಿನ್ನುವುದನ್ನು ದೂರವಿಡಬೇಕು. ಏಕೆಂದರೆ ಸಲಾಡ್ ಗಳಿಗೆ ಬಳಸುವ ಹಸಿ ತರಕಾರಿಗಳು ಮಳೆಗಾಲದಲ್ಲಿ ಬ್ಯಾಕ್ಟೀರಿಯಾಕ್ಕೆ ಗುರಿಯಾಗುತ್ತವೆ. ಇದರಿಂದಾಗಿ ನೀವು ಅನೇಕ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಲಾಡ್ ತಿನ್ನುವಾಗ ಜಾಗರೂಕರಾಗಿರಿ.
           ಸಮುದ್ರದ ಆಹಾರ: ಮಳೆಗಾಲದಲ್ಲಿ ಮೀನು ಅಥವಾ ಇನ್ನಾವುದೇ ಸಮುದ್ರಾಹಾರವನ್ನು ಸಹ ತಪ್ಪಿಸಬೇಕು. ಮಳೆಗಾಲವು ಹೆಚ್ಚಿನ ಸಮುದ್ರ ಜೀವಿಗಳ ಸಂತಾನೋತ್ಪತ್ತಿ ಸಮಯವಾಗಿದೆ. ಈ ಋತುವಿನಲ್ಲಿ ಮೀನು ತಿನ್ನುವುದು ಫುಡ್ ಪಾಯಿಸನ್ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ನೀರು ಕೂಡ ಬಹಳ ಕಲುಷಿತವಾಗಿರುವುದು. ಅಂತಹ ಪರಿಸ್ಥಿತಿಯಲ್ಲಿ, ಸಮುದ್ರಾಹಾರವನ್ನು ಸೇವಿಸುವುದರಿಂದ ನಿಮ್ಮನ್ನು ಅನೇಕ ರೋಗಗಳಿಗೆ ಬಲಿಯಾಗುವಂತೆ ಮಾಡುವುದು.


            ಅಣಬೆ: ಅಣಬೆಗಳು ಸೇವಿಸುವುದು ಸಹ ಮಳೆಗಾಲದಲ್ಲಿ ನಿಲ್ಲಿಸಬೇಕು. ಅಣಬೆ ತಿನ್ನುವುದರ ಮೂಲಕ ಸೋಂಕಿನ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಿನ್ನುವುದು ದೂರಮಾಡಿದರೆ ಒಳ್ಳೆಯದು. ಮೇಲಿನ ಎಲ್ಲಾ ಆಹಾರಗಳದಲ್ಲಿ ದೂರವಿಟ್ಟರೆ ಉತ್ತಮ. ಆದರೆ ತಿನ್ನಲೇಬೇಕು ಎನ್ನುವವರು ಚೆನ್ನಾಗಿ ಸ್ವಚ್ಛಗೊಳಿ, ಕುದಿಸಿ, ಬೇಯಿಸಿ ತಿಂದರೆ ಒಳ್ಳೆಯದು. ಇದರಿಂದ ಅಪಾಯದ ಪ್ರಮಾಣ ಕಡಿಮೆಯಾಗಬಹುದು.


            

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries