HEALTH TIPS

ಕೋವಿಡ್ 19 ಸಾಂಕ್ರಾಮಿಕ: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬೊಜ್ಜಿನ ಸಮಸ್ಯೆ, ಪೋಷಕರೇ ಎಚ್ಚರ

             ಕೋವಿಡ್‌ 19 ಸಾಂಕ್ರಾಮಿ ತಡೆಗಟ್ಟಲು ಲಾಕ್‌ಡೌನ್‌ ಮಾಡಬೇಕಾದ ಅನಿವಾರ್ಯತೆ ಇತ್ತು, ಆದರೆ ಈ ಲಾಕ್‌ಡೌನ್‌ ಇತರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸದೆ. ಪೋಷಕರೇ ನಿಮ್ಮ ಮಕ್ಕಳು ಈಗ ಮೊದಲಿಗಿಂತ ಸ್ವಲ್ಪ ದಪ್ಪಗಾಗಿದ್ದಾರೆ ಅಲ್ವಾ? ಹೌದು ಎಷ್ಟೋ ಪೋಷಕರು ನಮ್ಮ ಮಕ್ಕಳು ತುಂಬಾ ದಪ್ಪಗಾಗಿದ್ದಾರೆ ಎಂದು ಹೇಳುತ್ತಿದ್ದಾರೆ... ಈ ಮೈ ತೂಕ ನಿಯಂತ್ರಿಸದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು ಹುಷಾರ್‌!

             ಲಾಕ್‌ಡೌನ್‌ನಿಂದಾಗಿ ಮ್ಕಳು ಹೊರಗಡೆ ಹೋಗಿ ಆಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ, ಶಾಲೆ ಇಲ್ಲ, ಸ್ವಿಮ್ಮಿಂಗ್ ಇಲ್ಲ ಒಟ್ಟಿನಲ್ಲಿ ಯಾವುದೇ ದೈಹಿಕ ಚಟುವಟಿಕೆ ಇಲ್ಲ... ನಗರ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಈ ಲಾಕ್‌ಡೌನ್ ಟಿವಿ ನೋಡುತ್ತಾ, ಮೊಬೈಲ್‌ ನೋಡುತ್ತಾ ಕಳೆದಿದ್ದಾರೆ... ಇದರ ಜೊತೆಗೆ ಕುರುಕುಲು ತಿಂಡಿ ತಿನ್ನುವುದು ಇವೆಲ್ಲಾ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಉಂಟಾಗುವುದು.

            ಲಾಕ್‌ಡೌನ್‌ನಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಗೆ ಕಾರಣಗಳು ಲಾಕ್‌ಡೌನ್‌ನಲ್ಲಿ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿದೆ. ಮೊದಲಿನಂತೆ ಪಾರ್ಕ್‌ಗೆ ಹೋಗುವಂತಿಲ್ಲ, ಇತರ ಮಕ್ಕಳ ಜೊತೆ ಸೇರಿ ಆಡುವಂತಿಲ್ಲ ಮನೆಯೊಳಗೇ ಮಕ್ಕಳು ಇರುವುದರಿಮದ ಅವರ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಇನ್ನು ಮಕ್ಕಳ ಆಹಾರ ಕ್ರಮ ಅಂದರೆ ಫಾಸ್ಟ್‌ ಫುಡ್‌ಗಳು ಇವೆಲ್ಲಾ ಮಕ್ಕಳಲ್ಲಿ ಮೈ ತೂಕ ಹೆಚ್ಚಿಸಿದೆ.


             ಮಕ್ಕಳಲ್ಲಿ ಬೊಜ್ಜು ಹೆಚ್ಚಾದರೆ ಹೆಚ್ಚುವುದು ಆರೋಗ್ಯ ಸಮಸ್ಯೆ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು, ಹೆಚ್ಚಿನ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಕಾಡುವುದು. * ಗ್ಲೂಕೋಸ್‌ನಲ್ಲಿ ವ್ಯತ್ಯಾಸ ಉಂಟಾಗಿ ಟೈಪ್‌ 2 ಮಧುಮೇಹದ ಸಮಸ್ಯೆ ಚಿಕ್ಕ ಪ್ರಾಯದಲ್ಲಿಯೇ ಕಾಡುವುದು. * ಅಸ್ತಮಾ ಕಾಯಿಲೆ ಉಂಟಾಗುವುದು * ಕೈ-ಕಾಲುಗಳಲ್ಲಿ ನೋವು ಕಂಡು ಬರುವುದು (ಸಂಧಿ ನೋವು) * ಫ್ಯಾಟಿ ಲಿವರ್ ಸಮಸ್ಯೆ, ಗಾಲಾ ಸ್ಟೋನ್‌, ಗ ಎದೆಯುರಿ, ಅಸಿಡಿಟಿ ಮುಂತಾದ ಸಮಸ್ಯೆ ಕಾಡುವುದು.
             ಮಕ್ಕಳಲ್ಲಿ ಮೈ ತೂಕ ಹೆಚ್ಚಾದರೆ ಈ ಸಮಸ್ಯೆಯೂ ಉಂಟಾಗುವುದು * ಮಾನಸಿಕ ಒತ್ತಡ, ಖಿನ್ನತೆ ಸಮಸ್ಯೆ ಕಾಡುವುದು * ಆತ್ಮ ವಿಶ್ವಾಸ ಕಡಿಮೆಯಾಗುವುದು * ಇತರರು ತಮಾಷೆ ಮಾಡಿದಾಗ ಕೀಳೆರಿಮೆ ಹೆಚ್ಚುವುದು.
           ಗಂಭೀರ ಸಮಸ್ಯೆಗಳೂ ಚಿಕ್ಕ ಪ್ರಾಯದಲ್ಲಿ ಬೊಜ್ಜಿನ ಸಮಸ್ಯೆ ಇದ್ದರೆ ಬೆಳೆಯುತ್ತಿದ್ದಂತೆ ಹೃದಯ ಸಂಬಂಧಿ ಸಮಸ್ಯೆ, ಅಸ್ತಮಾ, ಟೈಪ್‌ 2 ಮಧುಮೇಹ, ಕ್ಯಾನ್ಸರ್‌ ಮುಂತಾದ ಗಂಭೀರ ಆರೋಗ್ಯ ಸಮಸ್ಯೆ ಕಾಡುವುದು. * ಚಿಕ್ಕ ಪ್ರಾಯದಲ್ಲಿಯೇ ಬೊಜ್ಜಿನ ಸಮಸ್ಯೆ ಇದ್ದರೆ ಬೆಳೆಯುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ಸಮಸ್ಯೆ ಕಾಡುವುದು.
           ಮಕ್ಕಳಲ್ಲಿ ಬೊಜ್ಜನ್ನು ತಡೆಯಲು ಪೋಷಕರು ಏನು ಮಾಡಬೇಕು? * ಮಕ್ಕಳಲ್ಲಿ ಬೊಜ್ಜನ್ನು ತಡೆಗಟ್ಟಲು ಪೋಷಕರು ಅವರಲ್ಲಿ ದೈಹಿಕ ಚಟುವಟಿಕೆ ಹೆಚ್ಚಿಸಲು ಪ್ರೇರೇಪಿಸಬೇಕಾಗಿದೆ.. ಅಂದರೆ ಯೋಗ ಮಾಡುವುದು, ಇದರ ವ್ಯಾಯಾಮಗಳನ್ನು ಅವರಿಂದ ಮಾಡಿಸಬೇಕು. * ಸೈಕ್ಲಿಂಗ್, ವಾಕ್‌ ಹೋಗುವುದು, ಮನೆಯಲ್ಲೇ ಶೆಟಲ್ ಆಡುವುದು ಇವೆಲ್ಲಾ ಮಕ್ಕಳನ್ನು ದೈಹಿಕ ಚಟುವಟಿಕೆಯಿಂದ ಇರುವಂತೆ ಮಾಡುವುದು. * ಮಕ್ಕಳನ್ನು ಒಂದೇ ಕಡೆ ಕೂರಲು ಬಿಡದೆ ಅವರು ದೈಹಿಕ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಿ.
           ಆಹಾರಕ್ರಮ * ಫಾಸ್ಟ್‌ ಫುಡ್ಸ್, ರೆಡಿ ಟು ಕುಕ್‌ ಫುಡ್ಸ್‌, ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರಗಳು, ಸಿಹಿ ತಿಂಡಿಗಳನ್ನು ಇವುಗಳನ್ನು ಮನೆಗೆ ತರುವುದು ಡಿಮೆ ಮಾಡಿ. * ಫ್ರೂಟ್ಸ್‌ ಅವರ ಆಹಾರಕ್ರಮದಲ್ಲಿ ಸೇರಿಸಿ. * ಅಧಿಕ ನಾರಿನಂಶವಿರುವ ಆಹಾರ ನೀಡಿ * ಕುರುಕುಲು ತಿಂಡಿ ಬದಲಿಗೆ ನಟ್ಸ್ ತಂದಿಡಿ ಇವೆಲ್ಲಾ ಮಕ್ಕಳಲ್ಲಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದು.


              

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries