HEALTH TIPS

ಕೋವಿಡ್ ಸಾವಿನ ಸಂಖ್ಯೆಯನ್ನು ವಾಸ್ತವಕ್ಕಿಂತ ಕಡಿಮೆ ತೋರಿಸಲಾಗುತ್ತಿದೆ ಎಂಬ ಮಾಧ್ಯಮ ವರದಿ ಸುಳ್ಳು: ಆರೋಗ್ಯ ಸಚಿವಾಲಯ

             ನವದೆಹಲಿಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆಯನ್ನು ವಾಸ್ತವಕ್ಕಿಂತ ಕಡಿಮೆ ತೋರಿಸಲಾಗುತ್ತಿದೆ ಎಂಬ ಮಾಧ್ಯಮ ವರದಿ ಕಪೋಲ ಕಲ್ಪಿತ. ಇದಕ್ಕೆ ಯಾವುದೇ ರೀತಿಯ ಆಧಾರ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ನ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ಆಧಾರದ ವರದಿಯನ್ನು ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್)ಯೊಂದಿಗೆ ಹೋಲಿಕೆ ಮಾಡಿದಾಗ ದೋಷಗಳು ಗಮನ ಸೆಳೆಯಿತು ಎಂದು ಹೇಳಿಕೆಯಲ್ಲಿ ಆರೋಗ್ಯ ಸಚಿವಾಲಯ ತಿಳಿಸಿದೆ.

           ರಾಷ್ಟ್ರೀಯ ಆರೋಗ್ಯ ಮಿಷನ್ನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್)ಯಲ್ಲಿ ವರದಿಯಾದ ಸಾವಿನ ಸಂಖ್ಯೆಯನ್ನು ಮಾಧ್ಯಮ ವರದಿ ಉಲ್ಲೇಖಿಸಿದೆ ಹಾಗೂ ಇತರ ಮಾಹಿತಿಗಳು ಸಿಗದೇ ಇರುವುದರಿಂದ ಈ ಸಾವುಗಳನ್ನು ಕೋವಿಡ್ ಸಾವುಗಳೆಂದು ಪರಿಗಣಿಸಬೇಕು ಎಂದು ಹೇಳಿದೆ. 2,50,000ಕ್ಕೂ ಅಧಿಕ ಸಾವುಗಳ ಕಾರಣ ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.

          ಯಾವುದೇ ಆಧಾರವಿಲ್ಲದೆ ದೊರಕಿದ ದತ್ತಾಂಶದ ಆಧಾರದ ಮೂಲಕ ಯಾವುದೇ ಸಾವನ್ನು ಕೋವಿಡ್ನಿಂದ ಸಂಭವಿಸಿದ ಸಾವು ಎಂದು ಹೇಳುವುದು ತಪ್ಪು ಹಾಗೂ ಇಂತಹ ಅನುಮಾನಗಳು ಕೇವಲ ಕಲ್ಪನೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್ ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದ ವಿಧಾನದಲ್ಲಿ ಕೇಂದ್ರ ಸರಕಾರದ ಪಾರದರ್ಶಕತ್ವವನ್ನು ಸಚಿವಾಲಯ ಒತ್ತಿ ಹೇಳಿದೆ.

ಅಲ್ಲದೆ, ಎಲ್ಲ ಕೋವಿಡ್ ಸಂಬಂಧಿತ ಸಾವುಗಳನ್ನು ದಾಖಲಿಸುವಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ ಎಂದು ಅದು ಹೇಳಿದೆ. ಈ ನಿರ್ದಿಷ್ಟ ವ್ಯವಸ್ಥೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ದತ್ತಾಂಶವನ್ನು ನಿರಂತರವಾಗಿ ಪರಿಷ್ಕೃತಗೊಳಿಸುತ್ತಿವೆ. ಅಸಂಗತತೆ ತಪ್ಪಿಸಲು ಭಾರತದಲ್ಲಿ ಕೋವಿಡ್ ಸಂಬಂಧಿತ ಸಾವನ್ನು ಸೂಕ್ತವಾಗಿ ದಾಖಲಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿ ಕೂಡ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries