ತಿರುವನಂತಪುರ: ರಾಜ್ಯದಲ್ಲಿ ಇಂದು ಮತ್ತಷ್ಟು ಜನರಿಗೆ ಝಿಕಾ ವೈರಸ್ ಪತ್ತೆಯಾಗಿದೆ. ಇಂದು ಐವರಿಗೆ ಝಿಕಾ ವೈರಸ್ ಇರುವುದು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.
ತಿರುವನಂತಪುರಂನ ವಾಳ್ಕುಳಂಗರದ 37 ವರ್ಷದ ವ್ಯಕ್ತಿಗೆ, ಪೆರುಂತಣ್ಣಿಯ 61 ವರ್ಷದ ವ್ಯಕ್ತಿಗೆ, ಬಲರಾಮಪುರಂನ 27 ವರ್ಷದ, ನೆಡುಂಕಾಡ್ ನ 7 ವರ್ಷದ ಮತ್ತು ಎರ್ನಾಕುಳಂನ ವಾಝಿಕುಳಂನ 34 ವರ್ಷದ ಯುವಕನಿಗೆ ಝಿಕಾ ಪತ್ತೆಯಾಗಿದೆ. ಇವರಲ್ಲಿ ಎರ್ನಾಕುಳಂ ಮೂಲದ ತಿರುವನಂತಪುರಂನಲ್ಲಿ ಆರೋಗ್ಯ ಶುಶ್ರೂಶಕಿಯಾಗಿರುವ ಮಹಿಳೆ ಸೇರಿದ್ದಾರೆ.ತಿರುವನಂತಪುರ ಮೆಡಿಕಲ್ ಕಾಲೇಜಿನ ವೈರಾಲಜಿ ಲ್ಯಾಬ್ ಮತ್ತು ಕೊಯಮತ್ತೂರಿನ ಮೈಕ್ರೋಬಯಾಲಜಿ ಲ್ಯಾಬ್‍ನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.
ರಾಜ್ಯದಲ್ಲಿ ಪ್ರಸ್ತುತ 11 ಝಿಕಾ ಪೀಡಿತರು ಚಿಕಿತ್ಸೆಯಲ್ಲಿದ್ದಾರೆ. ಉಳಿದವರು ಗುಣಮುಖರಾಗಿರುವರು.


