HEALTH TIPS

ವಿವಿಧ ಬೇಡಿಕೆ ಮುಂದಿರಿಸಿ ಎನ್‍ಟಿಯು ವತಿಯಿಂದ ಎಇಓ ಕಚೇರಿ ಎದುರು ಧರಣಿ

         ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್(ಎನ್‍ಟಿಯು) ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಗುರುವರ ಪ್ರತಿಭಟನೆ ನಡೆಸಲಾಯಿತು. ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಭಾಕರನ್ ನಾಯರ್ ಧರಣಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ರಂಜಿತ್ ಅಧ್ಯಕ್ಷತೆ ವಹಿಸಿದ್ದರು.

        ತೆರವಾಗಿರುವ ಶಿಕ್ಷಕ ಹುದ್ದೆಗಳಿಗೆ ತಕ್ಷಣ ನೇಮಕಾತಿ ನಡೆಸಬೇಕು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮುಖ್ಯ ಶಿಕ್ಷಕರ ನೇಮಕಾತಿ ನಡೆಸಬೇಕು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗೆ ವ್ಯವಸ್ಥೆ ಸರ್ಕಾರ ವಹಿಸಬೇಕು, ಆನ್‍ಲೈನ್ ತರಗತಿಗೆ ಪ್ರತ್ಯೇಕ ಕರಿಕ್ಯುಲಂ ತಯಾರಿಸಬೇಕು, ಇತರ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ವಾಪಾಸು ಕರೆಸಿಕೊಳ್ಳಬೇಕು, ವಿದ್ಯರ್ಥಿಗಳ ಕಲಿಕೆಗಿರುವ ವಿಕ್ಟರ್ಸ್ ಚ್ಯಾನೆಲ್‍ನಲ್ಲಿ ಸಂಸ್ಕøತ ಭಾಷೆಯ ಬಗ್ಗೆ ತೋರುವ ನಿರ್ಲಕ್ಷ್ಯ ಕೊನೆಗಾಣಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು. ಕೆ. ಅಜಿತ್ ಕುಮಾರ್, ಕೆ. ಸತೀಶನ್, ಬಿ.ಬಾಲಕೃಷ್ಣನ್, ಕೆ. ಸುರೇಖಾ ಟೀಚರ್, ಪಿ. ತುಳಸಿ, ಸಿ.ಎಚ್. ವಿದ್ಯಾ, ಎಸ್. ಅಮಿತಾ ಉಪಸ್ಥಿತರಿದ್ದರು. ಉಪಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ವಿ ಪ್ರದೀಪ್ ಸ್ವಾಗತಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries