HEALTH TIPS

ಕೋವಿಡ್ ಸಾಂಕ್ರಾಮಿಕವು ದೂರವಾಗಿರಬಹುದು, ಆದರೆ ಅಜಾಗರೂಕತೆಗೆ ಅವಕಾಶವಿಲ್ಲ: ಪ್ರಧಾನಿ ನರೇಂದ್ರ ಮೋದಿ

         ನವದೆಹಲಿ: ಜನಸಂದಣಿಯ ಪ್ರದೇಶಗಳಲ್ಲಿ ಜನರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅಜಾಗರೂಕತೆಗೆ ಯಾವುದೇ ಅವಕಾಶವಿಲ್ಲ ಎಂದು ಕಟುವಾಗಿ ಹೇಳಿದ್ದಾರೆ.

       ನಾವು ಮಾಡುವ ಒಂದೇ ಒಂದು ತಪ್ಪು ದೂರಗಾಮಿ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಸಾಂಕ್ರಾಮಿಕ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಇದು ಆಹ್ಲಾದಕರ ದೃಶ್ಯವಲ್ಲ. ಇದು 'ನಮ್ಮಲ್ಲಿ ಭಯದ ಪ್ರಜ್ಞೆಯನ್ನು' ಮೂಡಿಸಬೇಕು ಎಂದು ಮೋದಿ ಹೇಳಿದರು.

       ಸಂಪುಟ ಪುನರ್ ರಚನೆ ಬಳಿಕ ಸಚಿವರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದರು. ಈ ವೇಳೆ ಜನಸಂದಣಿಯ ಸ್ಥಳಗಳ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಪ್ರವಾಸಿ ಸ್ಥಳಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಇನ್ನು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಮರೆತಿದ್ದಾರೆ ಎಂದು ಹೇಳಿದರು.

        ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟವು ಸಂಪೂರ್ಣ ಹುರುಪಿನಿಂದ ನಡೆಯುತ್ತಿದೆ. ವ್ಯಾಕ್ಸಿನೇಷನ್ ಕಾರ್ಯಕ್ರಮವು ಸ್ಥಿರವಾಗಿ ನಡೆಯುತ್ತಿದೆ. ಅಲ್ಲದೆ ಪರೀಕ್ಷಾ ಸಂಖ್ಯೆಗಳು ಸಹ ಸ್ಥಿರವಾಗಿ ಹೆಚ್ಚಿವೆ. ಇಂತಹ ಸಮಯದಲ್ಲಿ, ಅಜಾಗರೂಕತೆ ಯಾವುದೇ ಅವಕಾಶ ಇರಬಾರದು. ಒಂದೇ ಒಂದು ತಪ್ಪು ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಕೋವಿಡ್ ವಿರುದ್ಧದ ಹೋರಾಟ ದುರ್ಬಲಗೊಳ್ಳುತ್ತದೆ ಎಂದು ಹೇಳಿರುವುದಾಗಿ ಮೂಲವೊಂದು ತಿಳಿಸಿದೆ.

        ಪ್ರಸ್ತುತ ಕೋವಿಡ್ ಸೋಂಕಿನ ಸಂಖ್ಯೆಗಳು ಕಡಿಮೆಯಾಗುತ್ತಿರುವುದರಿಂದ ಜನರು ಹೊರಹೋಗಲು ಬಯಸಬಹುದು. ಕೊರೋನಾ ಬೆದರಿಕೆ ಸ್ವಲ್ಪ ದೂರವಾಗಿರಬಹುದು. ಆದರೆ, ಇತರ ಹಲವು ರಾಷ್ಟ್ರಗಳಲ್ಲಿ ವೈರಸ್ ರೂಪಾಂತರಗೊಳ್ಳುತ್ತಿದೆ. ಇದನ್ನು ಮರೆಯಬಾರದು ಎಂದರು ಹೇಳಿದರು.

       ಈ ವಿಚಾರವಾಗಿ ಜನರಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶವಿರಬಾರದು. ಆದರೆ ಮುಂದಿನ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ವಿನಂತಿಸಬೇಕು ಎಂದು ಮೋದಿ ಸಚಿವರಿಗೆ ತಿಳಿಸಿದರು. ಇದರಿಂದಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರವು ಈ ಸಾಂಕ್ರಾಮಿಕ ರೋಗವನ್ನು ಮೀರಿ ಸಾಗಲು ಸಾಧ್ಯವಾಗುತ್ತದೆ.

        ಸಭೆಯಲ್ಲಿ ಮೋದಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries