ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ್ದಿದ್ದು ಅದು ಅರ್ಹರಿಗೆ ಲಭಿಸಲು ಪಿಣರಾಯಿ ನೇತೃತ್ವದ ರಾಜ್ಯ ಸರ್ಕಾರವು ತಡೆಯಾಗಿ ನಿಂತಿದೆ. ಅರ್ಹರಾದ ಕೃಷಿಕರಿಗೆ ಲಭಿಸಬೇಕಾದ ಕೃಷಿ ಸಮ್ಮಾನ್ ನಿಧಿಯನ್ನು ರಾಜ್ಯ ಸÀರ್ಕಾರ ಬಿಡುಗಡೆಮಾಡಿಲ್ಲ. ಆ ಮೊತ್ತವನ್ನು ಕೂಡಲೇ ಎಲ್ಲಾ ಕೃಷಿಕರಿಗೂ ತಲುಪುವಂತೆ ಅಗತ್ಯ ಕ್ರಮಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟಕ್ಕೆ ಬಿಜೆಪಿ ಮುಂದಾಗಲಿದೆ ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಹೇಳಿದರು.
ವಿವಿ|ಧ ಬೇಡಿಕೆಗಳೊಂದಿಗೆ ಬಿಜೆಪಿ ಕರ್ಷಕ ಮೋರ್ಚಾ ವತಿಯಿಂದ ಬದಿಯಡ್ಕ ಕೃಷಿ ಭವನದ ಮುಂಭಾ|ಗ ಶುಕ್ರವಾರ ನಡೆದ ಪ್ರತಿಭಟನೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗೆ ಅಗತ್ಯ ನೌಕರರನ್ನು ನೇಮಿಸದಿರುವುದರಿಂದ ಜನತೆಗೆ ಸಿಗಬೇಕಾದ ಸವಲತ್ತುಗಳು ಲಭಿಸುತ್ತಿಲ್ಲ. ಮಳೆಗಾಲದಲ್ಲಿ ಕೃಷಿಕಾರ್ಯಗಳಿಗೆ ಬೇಕಾದ ಗೊಬ್ಬರ ವಿತರಣೆಯೂ ನಡೆದಿಲ್ಲ ಎಂದು ಅವರು ದೂರಿದರು.
ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ.ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಳೆಗಾಲ ಪ್ರಾರಂಭವಾಗಿ ಕೃಷಿಕಾರ್ಯಗಳಿಗೆ ತೊಡಗಿಕೊಳ್ಳಲು ಕೃಷಿಕರು ಹಿಂದೇಟು ಹಾಕುವಂತಾಗಿದೆ. ಸಬ್ಸಿಡಿ ರೂಪದಲ್ಲಿ ಗ್ರಾಮಪಂಚಾಯಿತಿನಿಂದ ಸಿಗುವ ಗೊಬ್ಬರ ಹಾಗೂ ಇನ್ನಿತರ ಅನುಕೂಲತೆಗಳನ್ನು ನೀಡುವಲ್ಲಿ ಆಡಳಿತ ಪಕ್ಷವು ವಿಫಲವಾಗಿದೆ ಎಂದರು. ಕರ್ಷಕ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಡಾರು, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಕೃಷ್ಣ ಮಣಿಯಾಣಿ ಮೊಳೆಯಾರು, ಸೌಮ್ಯಾ ಮಹೇಶ್, ಸ್ವಪ್ನಾ, ಶುಭಲತಾ, ಅವಿನಾಶ್ ರೈ, ಎಂ.ನಾರಾಯಣ ಭಟ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


