ಬದಿಯಡ್ಕ: ವರ್ಗಾವಣೆಗೊಂಡ ಬದಿಯಡ್ಕ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀನಾಥ್ ಅವರನ್ನು ಕನ್ನೆಪ್ಪಾಡಿ ಆಶ್ರಯ ಅಶ್ರÀಯಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಆಡಳಿತ ಸಮಿತಿಯ ಅಧ್ಯಕ್ಷ ಪುದುಕೋಳಿ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ 2017ರಿಂದಲೇ ಆಶ್ರಮದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಆಶ್ರಮದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಶ್ರೀನಾಥ್ ಅವರು ಓರ್ವ ದಕ್ಷ ಪೋಲೀಸ್ ಅಧಿಕಾರಿಯಾಗಿ ಸ್ತುತ್ಯರ್ಹರಾಗಿದ್ದಾರೆ. ಸದಾ ಜನರೊಂದಿಗೆ ಬೆರೆಯುತ್ತಿರುವ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇತರರಿಗೆ ಮಾದರಿಯಾಗಿ ಮನ್ನಡೆಯುತ್ತಿರುವ ಇವರಿಗೆ ಇನ್ನೂ ಹೆಚ್ಚಿನ ಸೇವೆಗೈಯಲು ಭಗವಂತನು ಅನುಗ್ರಹಿಸಲಿ ಎಂಬುದೇ ನಮ್ಮ ಆಶಯವಾಗಿದೆ ಎಂದರು.
ಸನ್ಮಾನವನ್ನು ಸ್ವೀಕರಿಸಿ ಶ್ರೀನಾಥ್ ಅವರು ಮಾತನಾಡಿ ಸೇವಾವಯಲ್ಲಿ ಹಿರಿಯ ಜೀವಗಳ ಸೇವೆಗೈಯಲು ಸಿಕ್ಕಿರುವ ಅಪೂರ್ವ ಅವಕಾಶವು ನನ್ನ ಪಾಲಿನ ಪುಣ್ಯವಾಗಿದೆ. ಇಲ್ಲಿ ಆಶ್ರಮದ ಮೂಲಕ ಅನೇಕ ಉತ್ತಮ ಕಾರ್ಯಗಳು ನಡೆಯುತ್ತಿದೆ. ಆಶ್ರಮದ ಒಳಿತಿಗಾಗಿ ಮುಂದೆಯೂ ನನ್ನ ಸಹಕಾರವಿದೆ ಎಂದರು.
ಕಾರ್ಯದರ್ಶಿ ಶಿವಶಂಕರ ಭಟ್ ಕೋರಿಕ್ಕಾರು, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಬಿ. ಭಟ್ ನೀರ್ಚಾಲು, ರಾಜೇಶ್ ಮಾಸ್ತರ್ ಅಗಲ್ಪಾಡಿ ಶುಭಾಶಂಸನೆಗೈದರು.


