ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕೊರೋನದ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರುಣ್ಯ ಚಟುವಟಿಕೆಯ ಭಾಗವಾಗಿ ಕುಂಬ್ಡಾಜೆ ಪಂಚಾಯತಿಯ ಬೆಳಿಂಜ ಕಜೆ ಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ವಾಸವಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ನಿರ್ದೇಶನ ಪ್ರಕಾರ ಕೆ.ಪಿ.ಎಸ್.ಟಿ.ಎ. ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಮಿತಿಯ ವತಿಯಿಂದ ಕುಟುಂಬಕ್ಕೆ ಆನ್ಲೈನ್ ತರಗತಿ ವೀಕ್ಷಣೆ ಮಾಡಲು ಟಿವಿ ಹಸ್ತಾಂತರಿಸಲಾಯಿತು.
ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಹಸ್ತಾಂತರಿಸಿದರು. ಕೆ.ಎಸ್.ಎಸ್.ಟಿ.ಎ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾಸ್ತರ್, ರಾಜ್ಯ ಕೌನ್ಸಿಲರ್ ಯೂಸಪ್ ಮಾಸ್ತರ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು, ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಮಾಸ್ತರ್, ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್, ಕಾರ್ಯದರ್ಶಿ ರಾಧಾಕೃಷ್ಣನ್, ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ, ಕಾಂಗ್ರೆಸ್ ನೇತಾರ ಆನಂದ ಮವ್ವಾರು ಉಪಸ್ಥಿತರಿದ್ದರು.





