ತಿರುವನಂತಪುರ: ವರದಕ್ಷಿಣೆ ನಿಷೇಧದ ವಿರುದ್ಧ ವಿಶ್ವವಿದ್ಯಾಲಯಗಳು ತಮ್ಮ ಅಭಿಯಾನವನ್ನು ಪ್ರಬಲವಾಗಿ ಮುಂದುವರಿಸಬೇಕು ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದರು. ಮಕ್ಕಳು ಮತ್ತು ಪೋಷಕರು ಪ್ರವೇಶದ ಸಂದರ್ಭ ವರದಕ್ಷಿಣೆ ವಿರೋಧಿ ಬಂಧಕ್ಕೆ ಸಹಿ ಹಾಕಬೇಕು. ವರದಕ್ಷಿಣೆ ವ್ಯವಸ್ಥೆಯನ್ನು ರದ್ದುಗೊಳಿಸುವ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ರಾಜ್ಯಪಾಲರು ಒತ್ತಾಯಿಸಿದರು. ಎರ್ನಾಕುಳಂ ಅತಿಥಿಗೃಹದಲ್ಲಿ ಉಪಕುಲಪತಿಗಳೊಂದಿಗೆ ಇಂದು ನಡೆಸಿದ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಕಾಲೇಜು ಪ್ರವೇಶದ ಸಂದರ್ಭ ವಿವಾಹವಾಗುವ ವೇಳೆ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಹೇಳುವ ಅಫಿಡವಿಟ್‍ಗೆ ವಿದ್ಯಾರ್ಥಿಗಳು ಸಹಿ ಹಾಕಬೇಕು ಎಂದು ರಾಜ್ಯಪಾಲರು ಒತ್ತಾಯಿಸಿದ್ದರು. ವರದಕ್ಷಿಣೆ ತೊಡೆದುಹಾಕುವುದು ಕೇವಲ ಮಹಿಳೆಯರ ಸಮಸ್ಯೆಯಲ್ಲ. ಇದು ಪ್ರತಿಯೊಬ್ಬ ಮನುಷ್ಯನ ಅಗತ್ಯ. ಮಾಧ್ಯಮಗಳ ಸಹಕಾರದಿಂದ ಇದು ಯಶಸ್ವಿಯಾಗಲಿದೆ ಎಂದು ರಾಜ್ಯಪಾಲರು ಹೇಳಿದರು.
ಕೇರಳದ ಆರ್ಥಿಕ ಮತ್ತು ಸಾಂಸ್ಕøತಿಕ ಜೀವನಕ್ಕೆ ಮಹಿಳೆಯರು ಮಹತ್ವದ ಕೊಡುಗೆ ನೀಡುತ್ತಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಲುವು ಶ್ಲಾಘನೀಯ. ಇತರ ಹಲವು ರಾಜ್ಯಗಳ ಅನೇಕರನ್ನು ಸಂಪರ್ಕಿಸಲಾಗಿದೆ. ಬಾಂಡ್ ಅನುಷ್ಠಾನದ ಕುರಿತು ಚರ್ಚಿಸಲು ಈ ತಿಂಗಳ 21 ರಂದು ಮತ್ತೆ ಉಪಕುಲಪತಿಯನ್ನು ಭೇಟಿ ಮಾಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.





