ತಿರುವನಂತಪುರ: ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ನಿಷೇಧಿಸಲಾಗಿದ್ದ ವಾಹನ ಚಾಲನೆ ತರಬೇತಿ ಮತ್ತು ಪರೀಕ್ಷೆಯನ್ನು ಪುನರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಜುಲೈ 19 ರಂದು ಸೋಮವಾರದಿಂದ ತರಬೇತಿ ಮತ್ತು ಪರೀಕ್ಷೆಗಳು ಪುನರಾರಂಭಗೊಳ್ಳಲಿ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.
ಕೋವಿಡ್ ನಿಯಮ ನಿಬಂಧನೆಗಳಿಗೆ ಅನುಸಾರ ಪರೀಕ್ಷೆಗಳು ಮತ್ತು ತರಬೇತಿಯನ್ನು ನಡೆಸಲು ಸೂಚಿಸಲಾಗಿದೆ. ಬೋಧಕರಿಲ್ಲದೆ ತರಬೇತಿ ವಾಹನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊÀರೋನಾ ಮಾನದಂಡಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕೆಂದು ಸಚಿವ ಆಂಟನಿ ರಾಜು ಮೋಟಾರು ವಾಹನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವರು.






