ತಿರುವನಂತಪುರ: ರಾಜ್ಯದಲ್ಲಿ ಐಎಎಸ್ ಮಟ್ಟದಲ್ಲಿ ಭಾರಿ ಪ್ರಮಾಣದ ದೌರ್ಜನ್ಯ. ಆಡಳಿತಾತ್ಮಕ ಮಟ್ಟದಲ್ಲಿ, ಹಿರಿಯ ಅಧಿಕಾರಿಗಳ ಮರುಹಂಚಿಕೆ ಮೂಲಕ ಕಂಡುಬಂದಿದೆ. ಮುಖ್ಯ ಚುನಾವಣಾಧಿಕಾರಿಯಾಗಿದ್ದ ಟೀಕಾರಂ ಮೀನಾ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಅವರಿಗೆ ಯೋಜನಾ ಹಣಕಾಸು ವಿಭಾಗದ ಉಸ್ತುವಾರಿ ನೀಡಲಾಗಿದೆ.
ಹಣಕಾಸು ಕಾರ್ಯದರ್ಶಿ ಸಂಜಯ್ ಎಂ ಕೌಲ್ ಹೊಸ ಮುಖ್ಯ ಚುನಾವಣಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 35 ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಬಹುಷಃ ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ವರ್ಗಾವಣೆ ಇದೇ ಮೊದಲೆನ್ನಲಾಗಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು ಅವರಿಗೆ ಪ್ರವಾಸೋದ್ಯಮದ ಜೊತೆಗೆ ಉನ್ನತ ಶಿಕ್ಷಣ ಇಲಾಖೆಯ ಉಸ್ತುವಾರಿ ನೀಡಲಾಗಿದೆ. ನಗರ ಮತ್ತು ಗ್ರಾಮೀಣ ವಿಭಾಗದ ಉಸ್ತುವಾರಿಯನ್ನು ಸ್ಥಳೀಯಾಡಳಿತದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಲೀಧರನ್ ವಹಿಸಿಕೊಂಡಿದ್ದಾರೆ. ಏಳು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನೂ ವರ್ಗಾಯಿಸಲಾಗಿದೆ.
ಹೊಸ ಜಿಲ್ಲಾಧಿಕಾರಿಗಳ ಪಟ್ಟಿ:
ತ್ರಿಶೂರ್ ಜಿಲ್ಲೆಗೆ ಹರಿಥಾ ವಿ ಕುಮಾರ್, ಎರ್ನಾಕುಳಂ ಜಿಲ್ಲೆಗೆ ಜಾಫರ್ ಮಲಿಕ್, ಪತ್ತನಂತಿಟ್ಟು ಜಿಲ್ಲೆ ದಿವ್ಯಾ ಎಸ್ ಅಯ್ಯರ್, ಕೋಝಿಕೋಡ್ ಜಿಲ್ಲೆ ನರಸಿಂಹುಗರಿ ಟಿಎಲ್ ರೆಡ್ಡಿ, ಕೊಟ್ಟಾಯಂ ಜಿಲ್ಲೆ ಪಿ.ಕೆ.ಜಯಶ್ರೀ, ಇಡುಕಿ ಜಿಲ್ಲೆ ಶೀಬಾ ಜಾರ್ಜ್ ಮತ್ತು ಕಾಸರಗೋಡಿಗೆ ಭಂಡಾರಿ ಸ್ವಗತ್ ರಣವೀರ್ ಚಂದ್ ಅವರನ್ನು ನೇಮಕಮಾಡಲಾಗಿದೆ.
ಇತರ ಕರ್ತವ್ಯಗಳ ಪಟ್ಟಿ:
ಕ್ರೀಡಾ ಮತ್ತು ಯುವ ವ್ಯವಹಾರಗಳ ನಿರ್ದೇಶಕ ಜೆರೋಮ್ ಜಾರ್ಜ್ ಅವರಿಗೆ ಭೂ ಕಂದಾಯ ಜಂಟಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಎಂ.ಜಿ.ರಾಜಮಾಣಿಕ್ಯಂ (ನಿರ್ದೇಶಕರು, ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ)
ಎಸ್.ಹರಿಕಿಶೋರ್ (ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ), ಎ ಕೌಶಿಗನ್ (ಹೆಚ್ಚುವರಿ ನಿರ್ದೇಶಕ, ಪಶುಸಂಗೋಪನೆ), ಆರ್ ಗಿರಿಜಾ (ಮೀನುಗಾರಿಕೆ ನಿರ್ದೇಶಕ). ತ್ರಿಶೂರ್ ಜಿಲ್ಲಾಧಿಕಾರಿ ಶಾನವಾಸ್ ಅವರನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ನಿರ್ದೇಶಕರಾಗಿ ನೇಮಿಸಲಾಗಿದೆ.
ಡಾ.ಡಿ ಸಜಿತ್ ಬಾಬು (ನಿರ್ದೇಶಕರು, ನಾಗರಿಕ ಸರಬರಾಜು ವಿಭಾಗ, ಆಯುಷ್ ಮಿಷನ್ ನಿರ್ದೇಶಕರು); ಸುಹಾಸ್ (ರಸ್ತೆಗಳು ಮತ್ತು ಸೇತುವೆಗಳ ನಿಗಮ), ಎಸ್. ಸಾಂಬಶಿವ ರಾವ್ (ನಿರ್ದೇಶಕ, ಸರ್ವೆ ಲ್ಯಾಂಡ್ ರೆಕಾಡ್ರ್ಸ್ ವಿಭಾಗ, ಕೆಎಸ್.ಐ.ಟಿ.ಐ.ಎಲ್)





