ಬದಿಯಡ್ಕ: ಕೇರಳ ರಾಜ್ಯ ಚಪ್ಪರ ಸಾಮಾಗ್ರಿಗಳ ಸಂಘಟನೆಯ ನೇತೃತ್ವದಲ್ಲಿ ಬುಧವಾರ ರಾಜ್ಯಾದ್ಯಂತ ಮುಷ್ಕÀgವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಸಂಘಟನೆಯ ಬದಿಯಡ್ಕ ವಲಯದ ನೇತೃತ್ವದಲ್ಲಿ ನಡೆದ ಮುಷ್ಕÀರವನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿದÀುರು. ಅವರು ಮಾತನಾಡಿ ಚಪ್ಪÀರ ಸಾಮಾಗ್ರಿಗಳ ನೌಕÀರರು ಹಾಗೂ ಮಾಲಕÀರು ಅತೀ ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಸÀರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದÀರು.
ಸಂಘಟನೆಯ ವಲಯ ಕಾರ್ಯದರ್ಶಿ ಅಶ್ರಫ್ ಕಾಪಿಲ ಬೆಳಿಂಜ ಅಧ್ಯಕ್ಷತೆ ವಹಿಸಿದ್ದÀರು. ಜಿಲ್ಲಾ ಕಾರ್ಯದರ್ಶಿ ವೇಣು ಕುಂಟಾÀರು, ಉದನೇಶ್ವÀರ ಬದಿಯಡ್ಕ, ಹಮೀದ್ ಗುಣಾಜೆ ಮೊದಲಾದವರು ನೇತೃತ್ವ ವಹಿಸಿದ್ದÀರು. ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕು, ವಾಹನ ತೆರಿಗೆಯನ್ನು ಕಡಿತಗೊಳಿಸಬೇಕು, ಬಡ್ಡಿÀರಹಿತ 10 ಲಕ್ಷ ರೂ. ಧನಸಹಾಯವನ್ನು ನೀಡಬೇಕು ಮೊದಲಾದ ಬೇಡಿಕೆಗಳು ಪ್ರತಿಭಟನೆಯಲ್ಲಿ ಮೊಳಗಿತು. ವಲಯ ಖಜಾಂಜಿ ರತ್ನಾಕರ ಮಾವಿನಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ವೆಂಕಟÀರಮಣ ಭಟ್ ವಂದಿಸಿದರು.




