ಬದಿಯಡ್ಕ: ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆನ್ಲೈನ್ ಕಲಿಕಾ ಸೌಲಭ್ಯವಿಲ್ಲದ ಒಟ್ಟು 25 ಮಕ್ಕಳಿಗೆ ಶಾಲಾ ಅಧ್ಯಾಪಕರು ಹಾಗೂ ನೌಕರ ವೃಂದ , ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಊರ ದಾನಿಗಳ ನೆರವಿನೊಂದಿಗೆ ಮಕ್ಕಳ ಹೆತ್ತವರಿಗೆ ಮೊಬೈಲನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಗ್ರಾ.ಪಂ.ಸದಸ್ಯ ಹಮೀದ್ ಪಳ್ಳತಡ್ಕ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಅನಿತಾ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಹಮೀದ್ ಉಪಸ್ಥಿತರಿದ್ದರು. ಸಭೆಯಲ್ಲಿ ಮೊಬೈಲ್ ಫಲಾನುಭವಿಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಊರವರು, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಣಿ ಎಂ.ಎಂ ಸ್ವಾಗತಿಸಿ, ಮಲ್ಲಿಕಾ ಟೀಚರ್ ವಂದಿಸಿದರು. ಶಾಲಾ ಅಧ್ಯಾಪಕರಾದ ಗುರುಪ್ರಸಾದ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕೋವಿಡ್ ನಿಯಮವನ್ನು ಪಾಲಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.






