ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿಯ ನಾಗರಿಕರಲ್ಲಿ ಎಂಡೋಸಲ್ಫಾನ್ ಪೀಡಿತ ಸಂತ್ರಸ್ತರಿಗೆ ಕೋವಿಡ್ ಲಸಿಕೆ ನೀಡಲು ಚಾಲನೆ ನೀಡಲಾಗಿದೆ.
ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಬೆಳ್ಳೂರು ಗ್ರಾಮ ಪಂಚಾಯತಿಯೂ ಒಂದಾಗಿದೆ. 13 ವಾರ್ಡ್‍ಗಳಲ್ಲಿ 214 ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ ಮತ್ತು ಆರಂಭದಲ್ಲಿ ಸಿ ವರ್ಗದ ರೋಗಿಗಳಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ ಅವರು ವ್ಯಾಕ್ಸಿನೇಷನ್ ಡ್ರೈವ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 13 ನೇ ವಾರ್ಡ್ ಸದಸ್ಯೆ ದುರ್ಗಾದೇವಿ ಮತ್ತು ಇತರರು ಉಪಸ್ಥಿತರಿದ್ದರು.
ಉಪಶಾಮಕ ಆರೈಕೆ ರೋಗಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ಪೂರ್ಣಗೊಳಿಸುವಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೆಳ್ಳೂರು ಪಂಚಾಯತಿ ಆಡಳಿತ ಮಂಡಳಿ ಮತ್ತು ಆರೋಗ್ಯ ಕಾರ್ಯಕರ್ತರು ಅನುಕರಣೀಯರಾಗಿದ್ದಾರೆ.
ವೈದ್ಯಕೀಯ ಅಧಿಕಾರಿಗಳು, ಎಂಡೋಸಲ್ಫಾನ್ ದಾದಿಯರು, ಕಿರಿಯ ಸಾರ್ವಜನಿಕ ಆರೋಗ್ಯ ದಾದಿಯರು, ಆರೋಗ್ಯ ತಪಾಸಕರು, ಮಧ್ಯಮ ಮಟ್ಟದ ಸೇವಾ ಪೂರೈಕೆದಾರರು ಮತ್ತು ಕಾರ್ಯಕರ್ತರ ತಂಡ ಮನೆ-ಮನೆಗಳಿಗೆ ತೆರಳಿ ತುರ್ತು ಔಷಧಿ ಮತ್ತು ಆಂಬುಲೆನ್ಸ್‍ಗಳು ಸೇರಿದಂತೆ ರೋಗನಿರೋಧಕಗಳನ್ನು ನೀಡಲಿದೆ.





