ಮಂಜೇಶ್ವರ: ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಲಾಲ್‍ಬಾಗಿನಿಂದ ಚಿಪ್ಪಾರ್, ಕುರುಡಪದವು ಹೋಗುವ ರಸ್ತೆಯನ್ನು ಆಧುನೀಕರಣಗೊಳಿಸಿ ಕಾಮಗಾರಿ ನಡೆಸುವ ಬಗ್ಗೆ ಶಾಸಕ ಎ ಕೆ ಅಶ್ರಫ್ ರವರನ್ನು ಮುಸ್ಲಿಂ ಲೀಗ್ ಶಿರಂತಡ್ಕ ಶಾಖೆಯ ಕಾರ್ಯದರ್ಶಿ ಸಕೀರ್ ಶಿರಂತಡ್ಕ ಹಾಗೂ ಚಿಪ್ಪಾರ್ ಶಾಖೆಯ ಯೂತ್ ಲೀಗ್ ಕಾರ್ಯದರ್ಶಿ ರಿಯಾಝ್ ಚಿಪ್ಪಾರ್ ಭೇಟಿಯಾಗಿ ಮನವಿ ಸಲ್ಲಿಸಿದರು.
ರಸ್ತೆ ಅಗಲೀಕರಣ,ಚರಂಡಿ ನಿರ್ಮಾಣ, ಸೂಚನಾ ಫಲಕಗಳ ಅಳವಡಿಸುವಿಕೆ ಹಾಗೂ ಸೇತುವೆಯ ತಡೆಗೋಡೆ ಯನ್ನು ಪುನರ್ನಿರ್ಮಾಣಗೊಳಿಸುವಂತೆ ದಿವಂಗತ ಶಾಸಕ ಪಿ ಬಿ ಅಬ್ದುಲ್ ರಝಾಕ್ ಹಿಂದಿನ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದ್ದರೂ ತಿರಸ್ಕøತಗೊಂಡ ಬಗ್ಗೆ ಶಾಸಕರಿಗೆ ವರದಿ ಸಲ್ಲಿಸಲಾಯಿತು. ಪ್ರಸ್ತುತ ಯೋಜನೆಯ ಅಗತ್ಯತೆಯನ್ನು ಮನಗಂಡು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕರು ನೇತಾರರಿಗೆ ಭರವಸೆ ನೀಡಿದರು.





