ಮಧೂರು: ಬಿಜೆಪಿ ಯುವಮೋರ್ಚಾ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆಗಾಗಿ ಮೊಬೈಲ್ ಪೋನ್ ನೀಡುವ ಉದ್ದೇಶದಿಂದ ಆಯೋಜಿಸಲಾದ ಮೊಬೈಲ್ ಚಾಲೆಂಜ್ ಕಾರ್ಯಕ್ರಮವನ್ನು ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ ಬದಿಯಡ್ಕ ಉದ್ಘಾಟಿಸಿದರು. ಬಡಕುಟುಂಬಕ್ಕೆ ಮೊಬೈಲ್ ಪೋನ್ ವಿತರಿಸಿ ಅವರು ಮಾತನಾಡಿ, ವಿದ್ಯೆ ಪ್ರತಿಯೊಬ್ಬನಿಗೂ ಲಭಿಸಬೇಕೆನ್ನುವ ಸದುದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮವು ಬಡಕುಟುಂಬಕ್ಕೆ ನೆರವಾಗಲಿದೆ. ಸಂಘಟನಾ ಶಕ್ತಿಯಿಂದ ಇಂತಹ ಸಮಾಜಮುಖೀ ಕಾರ್ಯಗಳು ನಿರಂತರವಾಗಿ ನಡೆಯಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಯುವ ಮೋರ್ಚಾ ಮಧೂರು ಪಂಚಾಯಿತಿ ಅಧ್ಯಕ್ಷ ಅಶೋಕ್ ಸೂರ್ಲು, ಪ್ರಧಾನ ಕಾರ್ಯದರ್ಶಿ ಮನೋಜ್ ಕೂಡ್ಲು, ರೆಜಿತ್ ಮಧೂರು, ಕಾರ್ತಿಕ್, ಶಿವರಾಜ್ ಮೊದಲಾದವರು ನೇತೃತ್ವ ನೀಡಿದರು.





