ಉಪ್ಪಳ: ಕೊರೋನಾ ಮಹಾಮಾರಿ ತಡೆಗಟ್ಟಲು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ ವ್ಯಾಕ್ಸಿನ್ ವನ್ನು ಕೇರಳ ಸರ್ಕಾರ ಅಸಮರ್ಪಕವಾಗಿ ವಿತರಿಸುವುದನ್ನು ವಿರೋಧಿಸಿ ಓ ಬಿ ಸಿ ಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ತಾಲೂಕು ಆಸ್ಪತ್ರೆ ಮಂಗಲ್ಪಾಡಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಕಾರ್ಯಕ್ರಮವನ್ನು ಒಬಿಸಿ ಮೋರ್ಛಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ.ನವೀನ್ ರಾಜ್ ಉದ್ಘಾಟಿಸಿದರು. ಓ ಬಿ ಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಕಡಂಬಾರ್ ಅಧ್ಯಕ್ಷ ತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಬಾಬು ಕುಬಣೂರು, ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಮಯ್ಯ, ಯುವಮೋರ್ಛಾ ಮಂಡಲ ಅಧ್ಯಕ್ಷ ಚಂದ್ರಕಾಂತ್ ಶೆಟ್ಟಿ, ಓ ಬಿ ಸಿ ಮೋರ್ಛಾ ಮಂಡಲ ಕಾರ್ಯದರ್ಶಿ ಚಂದ್ರಹಾಸ ವಳಚ್ಚಿಲ್, ಓ ಬಿ ಸಿ ಮೋರ್ಛಾ ಪಂಚಾಯತಿ ಅಧ್ಯಕ್ಷ ಜಯರಾಜ್ ಬಂದ್ಯೋಡ್, ಪಂಚಾಯತಿ ಸದಸ್ಯ ಕಿಶೋರ್ ಕುಮಾರ್ , ಸತ್ಯ ವೀರನಗರ, ರಂಜಿತ್ ಕೋಡಿಬೈಲ್ ಉಪಸ್ಥಿತರಿದ್ದರು. ಧನರಾಜ್ ಪ್ರತಾಪನಗರ ಸ್ವಾಗತಿಸಿ, ಕಿಶೋರ್ ಭಗವತಿ ವಂದಿಸಿದರು.





