ಉಪ್ಪಳ: ಭಾರತೀಯ ಜನತಾ ಪಾರ್ಟಿ ಮಂಗಲ್ಪಾಡಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ದಿ. ಬಿಜೆಪಿ ನೇತಾರ ಸಂಕಯ್ಯ ಭಂಡಾರಿ ಅವರ ಜನ್ಮದಿನದ ಸ್ಮರಣೆಯನ್ನು ಮಂಗಳವಾರ ಐಲದಲ್ಲಿರುವ ಪಕ್ಷದ ಕಛೇರಿಯಲ್ಲಿ ನಡೆಸಲಾಯಿತು.
ಭಾಜಪ ಮಂಗಲ್ಪಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಮಯ್ಯ ಪುಷ್ಪಾರ್ಚನೆಗೈಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ .ಭಾಜಪ ಮಂಗಲ್ಪಾಡಿ ಪಂಚಾಯತಿ ಉಪಾಧ್ಯಕ್ಷ ಭರತ್ ರೈ, ಯುವಮೋರ್ಚ ಮಂಡಲಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ಧನರಾಜ್ ಪ್ರತಾಪನಗರ ಸ್ವಾಗತಿಸಿ, ಶರತ್ ವಂದಿಸಿದರು.





