ಕೊಚ್ಚಿ: ಕೇರಳದಲ್ಲಿ ಇಂದು ಒಂದು ನಯಾಪೈಸೆಯನ್ನೂ ಹೂಡಿಕೆ ಮಾಡುವುದಿಲ್ಲ ಎಂದು ಕೈಟೆಕ್ಸ್ ಎಂಡಿ ಸಾಬು.ಎಂ ಜಾಕೋಬ್ ಹೇಳಿದ್ದಾರೆ. ನನ್ನ ಹೂಡಿಕೆಯ ಬಗ್ಗೆ ಬೈಗುಳ, ನಿಂದೆ, ಅಪವಾದಗಳನ್ನು ಸಹಿಸಬೇಕಾಯಿತು. ಆದಾಗ್ಯೂ, ಈ ಯೋಜನೆ ತೆಲಂಗಾಣದಲ್ಲಿ ರಾಜಮರ್ಯಾದೆ ಪಡೆಯಿತು ಎಂದರು.
ಕೊಚ್ಚಿಗೆ ಭಾನುವಾರ ಆಗಮಿಸಿದ ಅವರು, ತೆಲಂಗಾಣದಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆ ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ತೆಲಂಗಾಣದಲ್ಲಿ ಹೂಡಿಕೆ ಮಾಡುವ ಮೂಲಕ ಕೋಟಿ ಗಳಿಸುವ ಅವಕಾಶವನ್ನು ಸೃಷ್ಟಿಸಿದ್ದಕ್ಕಾಗಿ ಕುನ್ನತ್ತುನಾಡು ಶಾಸಕರಿಗೆ ಹೆಚ್ಚಿನ ಅಭಿನಂದನೆ ಸಲ್ಲಿಸುವೆ ಎoದು ಅವರು ಲೇವಡಿಗೈದರು. ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿದ ಹೇಳಿಕೆಗೆ ಕೈಟೆಕ್ಸ್ ಎಂಡಿ ಈ ಪ್ರತಿಕ್ರಿಯೆ ನೀಡಿ ಮಾತನಾಡಿದರು. "ನನ್ನ ಮನಸ್ಸಿನಲ್ಲಿ ಮುಖ್ಯಮಂತ್ರಿಗೆ ವಿಶೇಷ ಸ್ಥಾನವಿದೆ. ನನ್ನನ್ನು ಸರಿಪಡಿಸಲು ಮತ್ತು ಶಿಸ್ತಿಗೆ ಒಳಪಡಿಸಲು ಅವರಿಗೆ ಅಧಿಕಾರವಿದೆ. ಆದ್ದರಿಂದ, ಮುಖ್ಯಮಂತ್ರಿಯ ಪದಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ರಾಜಕೀಯ ವೇದಿಕೆಗಳಲ್ಲಿ ಇದರ ಬಗ್ಗೆ ಪ್ರತಿಕ್ರಿಯಿಸಲಾಗುವುದು. ನಾನು ಉದ್ಯಮಿ. ನನ್ನ ಈ ಮಾದರಿಯ ಸೋಲು ಕೇರಳದ ವ್ಯಾಪಾರ ಸಮುದಾಯಕ್ಕೆ ಒಂದು ಮಾದರಿ, ”ಎಂದರು.
ಮೊದಲ ಹಂತದಲ್ಲಿ ತೆಲಂಗಾಣದಲ್ಲಿ 1,000 ಕೋಟಿ ರೂ.ನೆರವಿಂದ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಹೆಚ್ಚು ಹೂಡಿಕೆ ಮಾಡಬೇಕೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಕರೆ ಮಾಡಿದ್ದರು. ಅವರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿರುವರು. ಕರ್ನಾಟಕದ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲು ನನ್ನನ್ನು ಆಹ್ವಾನಿಸಲಾಗಿದೆ. ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೈಟೆಕ್ಸ್ ಎಂಡಿ ಸಾಬು ಎಂ ಜಾಕೋಬ್ ಹೇಳಿರುವರು.





