ತಿರುವನಂತಪುರ: ರಾಜ್ಯದಲ್ಲಿ ಅನರ್ಹರಾದವರು ಆದ್ಯತೆಯ ಪಡಿತರ ಚೀಟಿ ಹೊಂದಿದ್ದರೆ ಅಂತವರ ವಿರುದ್ಧ ಸಾರ್ವಜನಿಕ ವಿತರಣಾ ಇಲಾಖೆ ಕಠಿಣ ಕ್ರಮ ಕೈಗೊಳ್ಲಲು ಮುಂದಾಗಿದೆ. ಅಂತಹ ಜನರು ದಂಡ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಾರೆ ಎಂದು ಅಧಿಕೃತರು ತಿಳಿಸಿದ್ದಾರೆ.
ಯಾರು ಅನರ್ಹರು:
1. ತಿಂಗಳಿಗೆ 25000 ರೂ.ಗಿಂತ ಹೆಚ್ಚಿನ ಆದಾಯ ಹೊಂದಿದವರು,
2. ಒಂದಕ್ಕಿಂತ ಹೆಚ್ಚು ಎಕರೆ ಭೂಮಿ ಇದ್ದವರು,
3. ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಮನೆ ಉಳ್ಳವರು,
4. ಜೀವನೋಪಾಯದ ಏಕೈಕ ಸಾಧನವಾದ ಟ್ಯಾಕ್ಸಿ ಹೊರತುಪಡಿಸಿ ನಾಲ್ಕು ಚಕ್ರ ವಾಹನಗಳಿದ್ದರೆ ಅಂತವರ ಆದ್ಯತಾ ಕಾರ್ಡ್‍ಗಳು ಅನರ್ಹ.
ಮೇಲಿನ ನಾಲ್ಕು ಮಾನದಂಡಗಳಲ್ಲಿ ಯಾವುದಾದರೂ ಇದ್ದರೆ, ನೀವು ಆರೆಂಜ್ (ಹಳದಿ),ಆದ್ಯತೆ (ಗುಲಾಬಿ) ಮತ್ತು ಬಣ್ಣದ ಪಡಿತರ ಚೀಟಿಗಳಿಗೆ ಅರ್ಹರಲ್ಲ.
ಒಂದು ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಕೆಲಸ ಹೊಂದಿದ್ದರೆ ಅಥವಾ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಆ ಕುಟುಂಬವು ಹಳದಿ, ಗುಲಾಬಿ ಮತ್ತು ನೀಲಿ ಕಾರ್ಡ್‍ಗಳಿಗೆ ಅರ್ಹವಲ್ಲ.
ಅನುಚಿತವಾಗಿ ಹಳದಿ, ಗುಲಾಬಿ ಮತ್ತು ನೀಲಿ ಪಡಿತರ ಚೀಟಿಗಳನ್ನು ಹೊಂದಿರುವ ಪಡಿತರ ಖರೀದಿದಾರರು ಸಂಬಂಧಪಟ್ಟ ತಾಲ್ಲೂಕು ಸರಬರಾಜು ಅಧಿಕಾರಿಗೆ ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಬೇಕು ಮತ್ತು ಕಾರ್ಡ್ ಅನ್ನು ಬದಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
ಜುಲೈ 15 ರೊಳಗೆ ಇವನ್ನು ಮಾಡಲು ವಿಫಲವಾದರೆ ಪಡಿತರ ವಸ್ತುಗಳ ಸಂಪೂರ್ಣ ಮೌಲ್ಯ, ಮಾರುಕಟ್ಟೆ ಬೆಲೆ ಮತ್ತು ಭಾರೀ ಮೊತ್ತದ ದಂಡವನ್ನು ಕಾರ್ಡುದಾರರ ಮೇಲೆ ವಿಧಿಸಲಾಗುವುದು ಎಂದು ನಾಗರಿಕ ಸರಬರಾಜು ನಿರ್ದೇಶಕರು ತಿಳಿಸಿದ್ದಾರೆ.





