ತಿರುವನಂತಪುರ: ಓಣಂಗೆ ಸಂಬಂಧಿಸಿದಂತೆ ಒದಗಿಸಲಾಗುವ ವಿಶೇಷ ಕಿಟ್‍ನಲ್ಲಿ ಮಕ್ಕಳಿಗೆ ಕ್ಯಾಂಡಿ ಪ್ಯಾಕ್ ನೀಡುವ ನಿರ್ಧಾರವನ್ನು ಕೈಬಿಡಲಾಗಿದೆ. ಬದಲಾಗಿ, ಕಿಟ್‍ನಲ್ಲಿ ಕ್ರೀಮ್ ಬಿಸ್ಕತ್ತು ಇರುತ್ತದೆ. ಕಿಟ್ ವಿತರಣಾ ಪ್ರಕ್ರಿಯೆಯು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ವಿತರಣೆಯ ಸಮಯದಲ್ಲಿ ಕರಗಿ ಹೋಗಬಹುದು ಎಂಬ ಕಾರಣಕ್ಕೆ ಚಾಕೊಲೇಟ್ ಕೈಬಿಡಲಾಗಿದೆ.
ಪಾಯಸ ತಯಾರಿಸಲು ಬೇಕಾದ ರವೆ ಅಥವಾ ಶ್ಯಾವಿಗೆ ಕಿಟ್ ನಲ್ಲಿರಲಿದೆ. ಅಗತ್ಯವಾದ ಏಲಕ್ಕಿ ಮತ್ತು ಬೀಜಗಳು ಇರುತ್ತವೆ. ಸಾಸಿವೆ ಕೂಡ ಸೇರಿಸಲಾಗಿದೆ. ಇದು ವಸ್ತುಗಳ ಸಂಖ್ಯೆಯನ್ನು 13 ರಿಂದ 17 ಕ್ಕೆ ಹೆಚ್ಚಿಸಿದೆ.
ಮೆಣಸಿನ ಪುಡಿಯ ಬಲಿಗೆ ಮೆಣಸನ್ನೇ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಿಟ್‍ನಲ್ಲಿ ಸೇರಿಸಬೇಕಾದ ವಸ್ತುಗಳ ಕುರಿತು ಆಹಾರ ಸಚಿವ ಜಿ.ಆರ್ ಅನಿಲ್ ಅವರು ಸಪ್ಲೈಕೊ ಎಂಡಿ ಅಲಿ ಅಸ್ಗರ್ ಪಾಷಾ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವರು. ಆದರೆ ಬೆಲೆÉ ಅನುಸರಿಸಿ ವಸ್ತುಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಕಿಟ್‍ನ ನಿರೀಕ್ಷಿತ ವೆಚ್ಚ 469.70 ರೂ. ಒಟ್ಟು ವೆಚ್ಚ 408 ಕೋಟಿ ರೂ. ಈ ಬಗ್ಗೆ ಸಪ್ಲೈಕೊ ಸರ್ಕಾರಕ್ಕೆ ಮಾಹಿತಿ ನೀಡಿದೆ. ಕಿಟ್‍ನಲ್ಲಿ ಸಕ್ಕರೆ, ತೆಂಗಿನ ಎಣ್ಣೆ, ಶ್ಯಾವಿಗೆ ಮತ್ತು ಬಿಸ್ಕತ್ತು ಸೇರಿದಂತೆ ಹದಿನೇಳು ವಸ್ತುಗಳು ಇವೆ. 86 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಕಿಟ್ ಲಭ್ಯವಾಗಲಿದೆ.





