ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಅವರು ಮಂಗಳವಾರ ಪದಗ್ರಹಣ ಮಾಡಿದ್ದಾರೆ.
ಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಇವರಾಗಿದ್ದಾರೆ. 2010 ಐ.ಎ.ಎಸ್. ಬ್ಯಾಚ್ ನ 69ನೇ ರಾಂಕ್ ಪಡೆದಿರುವ ಇವರು ಮಹಾರಾಷ್ಟ್ರ ಮೂಲನಿವಾಸಿಯಾಗಿದ್ದಾರೆ. ಅಮೆರಿಕಾದ ಮಿಷಿಗನ್ ವಿವಿಯಿಂದ ಬಿಝಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ, ಇಂದಿರಾಗಾಂಧಿ ನ್ಯಾಷನಲ್ ಮುಕ್ತ ವಿವಿಯಿಂದ ಪಬ್ಲಿಕ್ ಪಾಲಿಸಿಯಲ್ಲಿ ಸ್ನಾತಕೋತ್ತರ ಪದವಿ, ಮುಂಬಯಿ ವಿವಿಯಿಂದ ಇಲೆಕ್ಟ್ರಾ ನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಈ ಹಿಂದೆ ಉದ್ದಮೆ ಇಲಾಖೆಯಲ್ಲಿ ನಿರ್ದೇಶಕಿಯಾಗಿದ್ದ ಇವರು ಈಗ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಕೇರಳ ಮಿಲ್ಕ್ ಸಹಕಾರಿ ಮಾರ್ಕೆಟಿಂಗ್ ಫೆಡೆರೇಷನ್ ಲಿ.ಯ ಆಡಳಿತೆ ನಿರ್ದೇಶಕಿ, ಯೋಜನೆ ಹಣಕಾಸು ಇಲಾಖೆ ಸಹಾಯಕ ಕಾರ್ಯದರ್ಶಿ, ಪರಿಶಿಷ್ಟ ಪಂಗಡ ಇಲಾಖೆ ನಿರ್ದೇಶಕಿ, ಫೆÇೀರ್ಟ್ ಕೊಚ್ಚಿ ಉಪಜಿಲ್ಲಾಧಿಕಾರಿ ಇತ್ಯಾದಿ ಪದವಿಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು.
ದಿ.ರಣ್ವೀರ್ ಚಂದ್ ಭಂಡಾರಿ-ಸುಷ್ಮಾ ಭಂಡಾರಿ ದಂಪತಿ ಪುತ್ರಿ. ತಿರುವನಂತಪುರ ಶ್ರೀಚಿತ್ರಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆಂಡ್ ಟೆಕ್ನಾಲಜಿಯ ನ್ಯೂರಲ್ ಇಂಜಿನಿಯರ್ ಆಗಿರುವ ನಿಕುಂಜ್ ಭಗತ್ ಇವರ ಪತಿಯಾಗಿದ್ದಾರೆ, ವಿಹಾನ್ ಮತ್ತು ಮಿರಾಲ್ ಮಕ್ಕಳಾಗಿದ್ದಾರೆ.






