ತಿರುವನಂತಪುರ: ಬುಧವಾರ ರಾಜ್ಯದಲ್ಲಿ ಸಾರ್ವಜನಿಕ ರಜಾದಿನವಾಗಿದೆ. ಬಕ್ರೀದ್ ರಜೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ ಸರ್ಕಾರಿ ಕ್ಯಾಲೆಂಡರ್‍ನಲ್ಲಿ ಸಾರ್ವಜನಿಕ ರಜಾದಿನವಾಗಿ ತೋರಿಸಲಾಗಿತ್ತು. ಆದರೆ ಸರ್ಕಾರ ಬುಧವಾರಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳು ತೆರೆದಿರಲಿವೆ.
ನಾಳೆಯೂ ರಾಜ್ಯದಲ್ಲಿ ಲಾಕ್‍ಡೌನ್‍ಗಳಿಗೆ ರಿಯಾಯಿತಿಗಳಿವೆ. ಟ್ರಿಪಲ್ ಲಾಕ್‍ಡೌನ್ ಘೋಷಿಸಲಾದ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ಪ್ರದೇಶಗಳಲ್ಲಿ ಅಂಗಡಿ-ಮಳಿಗೆಗಳು ತೆರೆದಿರಲಿವೆ.





