ಉಪ್ಪಳ: ಜಲೈ 26ರಂದು ನಯಬಝಾರ್ ನ ಲಯನ್ಸ್ ಕ್ಲಬ್ ನಲ್ಲಿ ನಡೆದ ಕೋವಿಡ್ ಲಸಿಕೆ ನೀಡುವಲ್ಲಿ ಉಂಟಾದ ಗೊಂದಲ ಹಾಗೂ ಪೆÇೀಲಿಸ್ ದೌರ್ಜನ್ಯವನ್ನು ಬಾಕುಡ ಸಮಾಜ ಸೇವಾ ಸಮಿತಿಯ ವತಿಯಿಂದ ತೀವ್ರವಾಗಿ ಖಂಡಿಸಿ ತಾಲೂಕು ಹೆಡ್ ಕಾರ್ಟಸ್ ಆಸ್ಪತ್ರೆ ಮಂಗಲ್ಪಾಡಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಕೋವಿಡ್ ಲಸಿಕೆಯ ಸಹಿತ ಎಲ್ಲಾ ಸೌಲಭ್ಯಗಳು ಎಸ್.ಸಿ./ಎಸ್.ಟಿ. ವಿಭಾಗದವರಿಗೆ ಸಿಗಬೇಕು ಎಂಬ ಒತ್ತಾಯವನ್ನು ಈ ಸಂಧರ್ಭದಲ್ಲಿ ಮಾಡಲಾಯಿತು.ಬಾಕುಡ ಸಮಾಜ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಮಂಗಲ್ಪಾಡಿ, ಕೋಶಾಧಿಕಾರಿ ರಘುರಾಮ ಛತ್ರಂಪಳ್ಳ, ಕ್ರೀಡಾ ಕಾರ್ಯದರ್ಶಿ ಶಿವ ಬಲ್ಲಿಮೊಗರು ,ಪದಾಧಿಕಾರಿಗಳಾದ ಸತೀಶ್ ಮಂಗಲ್ಪಾಡಿ, ಮಂಜು ಕಾರ್ಲೆ, ಉದಯ ಸೋಂಕಾಲ್, ಬ್ರಿಜ್ಜು ಬಲ್ಲಕ್ಕೂರು ಭಾಗವಹಿಸಿದರು.ಪ್ರತಿಭಟನೆಯ ನಂತರ ಸಂಬಂದಪಟ್ಟ ಅಧಿಕೃತರಿಗೆ ಮನವಿ ಸಲ್ಲಿಸಲಾಯಿತು.




