ಉಪ್ಪಳ: ಗಡಿನಾಡ ಕಲಾಸಂಘ ಪೈವಳಿಕೆ ಹಾಗೂ ನಾಗರಿಕ ಸಮಿತಿ ಪೈವಳಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಕನ್ನಡ ಹೋರಾಟಗಾರ, ಪೈವಳಿಕೆಯ ಸಾಂಸ್ಕøತಿಕ ರಾಯಭಾರಿ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ದಿ.ಸಿ ರಾಘವ ಬಲ್ಲಾಳ್ ಸಂಸ್ಮರಣಾ ಕಾರ್ಯಕ್ರಮ ನಿವೃತ್ತ ಮುಖ್ಯೋಪಾಧ್ಯಾಯ ಮೊಹಮ್ಮದ್ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ,ಅಬ್ದುಲ್ ಅಝಿಜ್ ಮರಿಕ್ಕೆ, ಎಸ್ ನಾರಾಯಣ ಭಟ್,ಅಬ್ದುಲ್ ರಹಿಮಾನ್ ಪೈವಳಿಕೆ, ಪ್ರಾಂಶುಪಾಲ ವಿಶ್ವನಾಥ, ಮುಖ್ಯೋಪಾಧ್ಯಾಯರುಗಳಾದ ಇಬ್ರಾಹಿಂ ಬಿ, ಅಹ್ಮದ್ ಹುಸೈನ್ ಪಿ.ಕೆ, ಶ್ಯಾಮ ಭಟ್, ವಸಂತ ಕುಮಾರ್ ಸಿ ಕೆ, ಬೇಕೂರು ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಟೀಚರ್ , ನಿವೃತ್ತ ಅಧ್ಯಾಪಕ ಶೇಖರ ಶೆಟ್ಟಿ , ಶ್ರೀಕುಮಾರಿ ಟೀಚರ್, ಮೊದಲಾದವರು ನುಡಿ ನಮನದೊಂದಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಕ.ಸಾ.ಪ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ಮಾತನಾಡಿ, ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಎನ್ ಕೆ ಮೋಹನ್ ದಾಸ್ ಅವರ ಶ್ರದ್ದಾಂಜಲಿ ಸಂದೇಶವನ್ನು ವಾಚಿಸಿದರು. ಅಧ್ಯಾಪಕ ಹರೀಶ್ ಕುಮಾರ್ ಬಿ ಸ್ವಾಗತಿಸಿ, ಅಧ್ಯಾಪಕ ನಯನಪ್ರಸಾದ್ ಎಚ್ ಟಿ ವಂದಿಸಿದರು.


