ತಿರುವನಂತಪುರ: ಮದ್ಯದಂಗಡಿಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ತಂದಿದೆ. ಮದ್ಯ ಖರೀದಿಗೆ ಹಣವನ್ನು ಮುಂಚಿತವಾಗಿ ಪಾವತಿಸಿ ಮದ್ಯವನ್ನು ಖರೀದಿಸಲು ಕೌಂಟರ್‍ಗೆ ತೆರಳಲು ಅನುವಾಗು ಹೊಸ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಮದ್ಯದಂಗಡಿಗಳ ಮುಂದೆ ದೊಡ್ಡ ಸಾಲುಗಳು ಕಾಣಿಸಿಕೊಳ್ಳುವುದು ಸಮಸ್ಯೆಯಾಗಿ ಪರಿಣಮಿಸಿದೆ. ಅದನ್ನು ತಪ್ಪಿಸಲು, ಬಿವರೇಜ್ ಮಳಿಗೆಗಳಲ್ಲಿ ವಿಶೇಷ ಕೌಂಟರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಮುಂಗಡ ಪಾವತಿಸಲು ಕೌಂಟರ್ ಸಿದ್ಧವಾಗಲಿದೆ ಮತ್ತು ತಕ್ಷಣ ಮದ್ಯವನ್ನು ನೀಡಲು ಇದು ನೆರವಾಗಲಿದೆ ಸಹ ಮುಖ್ಯಮಂತ್ರಿ ಹೇಳಿದರು. ಕೌಂಟರ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಪ್ರಸ್ತುತ ದಟ್ಟಣೆ ತಪ್ಪಿಸಲು ಇತರ ವೈಜ್ಞಾನಿಕ ವಿಧಾನಗಳನ್ನು ಪರಿಚಯಿಸಲಾಗುವುದು ಎಂದು ಸಿಎಂ ಹೇಳಿದರು.
ಬಿವರೇಜ್ ಎದುರು ಸರ್ಕಾgದ À ನಿಯಮಗಳನ್ನು ಉಲ್ಲಂಘಿಸಿ ಖರೀದಿಗೆ ಅನುವು ಮಾಡಿರುವುದನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಕೇವಲ 20 ಜನರಿಗೆ ವಿವಾಹ ಸಮಾರಂಭಗಳಿಗೆ ಅವಕಾಶ ನೀಡಿದ್ದರೆ ಬಾರ್‍ಗಳ ಮುಂದೆ ಜನಸಂದಣಿಯನ್ನು ಏಕೆ ನಿಯಂತ್ರಿಸಲಾಗುವುದಿಲ್ಲ ಎಂದು ಹೈಕೋರ್ಟ್ ಕೇಳಿತ್ತು. ನಂತರ ಜನಸಂದಣಿಯನ್ನು ನಿಯಂತ್ರಿಸಲು ಬಾರ್‍ಗಳಲ್ಲಿ ವಿದೇಶಿ ಮದ್ಯವನ್ನು ಮಾರಾಟ ಮಾಡಲು ಪ್ರಾರಂಭಿಸಲಾಯಿತು. ಬೆವ್ಕೊ ಬಿವರೇಜ್ ಗಳು ಮೊದಲು ಕೊರೋನಾ ಮಾನದಂಡಗಳನ್ನು ಪೂರೈಸಬೇಕು ಎಂದು ಸೂಚಿಸುವ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.


