HEALTH TIPS

ಒಂದು ಡೋಸ್ ಲಸಿಕೆಯಿಂದ ಕೋವಿಡ್19 ವಿರುದ್ಧ ಗಣನೀಯ ರಕ್ಷಣೆ ದೊರೆಯದು: ಅಧ್ಯಯನ ವರದಿ ಬಹಿರಂಗ

                 ನವದೆಹಲಿ:ಒಂದೇ ಡೋಸ್ ಲಸಿಕೆಯಿಂದ ರೋಗಲಕ್ಷಣ ಸಹಿತವಾದ ಅಥವಾ ಸೌಮ್ಯ ಇಲ್ಲವೇ ತೀವ್ರವಾದ ಲಕ್ಷಣಗಳಿರುವ ಕೋವಿಡ್-19 ರೋಗದಿಂದ ಯಾವುದೇ ಗಣನೀಯವಾದ ರಕ್ಷಣೆ ದೊರೆಯುವುದಿಲ್ಲವೆಂದು ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಆರೋಗ್ಯಪಾಲನಾ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನ ವರದಿಯು ಬಹಿರಂಗಪಡಿಸಿದೆ.

             ಈ ಸಂಶೋಧನಾತ್ಮಕ ಅಧ್ಯಯನವನ್ನು ಮಾರ್ಚ್ 1 ಹಾಗೂ ಮೇ 31ರ ನಡುವೆ ಡಾ. ರುಮಾ ಸಾತ್ವಿಕ್ ನೇತೃತ್ವದ ಆಸ್ಪತ್ರೆಯ ವೈದ್ಯರ ತಂಡವು 4276 ಉದ್ಯೋಗಿಗಳ ನಡುವೆ ಈ ಅಧ್ಯಯನವನ್ನು ನಡೆಸಲಾಗಿತ್ತು.ಕೇವಲ ಒಂದೇ ಡೋಸ್ ಲಸಿಕೆಯನ್ನು ಪಡೆದವರಲ್ಲಿ ಮತ್ತು ಲಸಿಕೆಯನ್ನು ಪಡೆಯದೇ ಇದ್ದವರ ನಡುವೆ ಕೋವಿಡ್19 ರೋಗಲಕ್ಷಣ ರಹಿತ ಪ್ರಕರಣಗಳು ಇಲ್ಲವೇ ತೀವ್ರ ಸೋಂಕಿನ ಪ್ರಕರಣಗಳಲ್ಲಿ ಯಾವುದೇ ಗಣನೀಯವಾದ ವ್ಯತ್ಯಾಸವಿಲ್ಲವೆಂಬುದನ್ನು ಅಧ್ಯಯನ ತಂಡವು ಪತ್ತೆಹಚ್ಚಿವೆ.

            ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳು ಪಡೆದ 2716 ಉದ್ಯೋಗಿಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು ಮತ್ತು ಅವರಲ್ಲಿ 927 ಮಂದಿ ಲಸಿಕೆಯನ್ನು ಪಡೆಯದೇ ಇದ್ದವರಾಗಿದ್ದಾರೆ. ಕೋವ್ಯಾಕ್ಸಿನ್ ಅಥವಾ ಫೈಝರ್ ಲಸಿಕೆಗಳನ್ನು ಪಡೆದ 20 ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನದಿಂದ ಹೊರಗಿಡಲಾಗಿತ್ತು.

            ಈ ವರ್ಷದ ಮಾರ್ಚ್ ಹಾಗೂ ಮೇ 31ರ ನಡುವಿನ ಅವಧಿಯಲ್ಲಿ ಹೊಸದಿಲ್ಲಿಯಲ್ಲಿ ವ್ಯಾಪಿಸಿದ ಕೊರೋನ ಸೋಂಕಿನ ಎರಡನೆ ಅಲೆಯ ಸಂದರ್ಭ 4276 ಆರೋಗ್ಯ ಕಾರ್ಯಕರ್ತರ ಪೈಕಿ 560 ಮಂದಿ ಅಥವಾ 13.1 ಶೇಕಡ ಮಂದಿಗೆ ಕೊರೋನ ಸೋಂಕು ತಗಲಿತ್ತು. ಅವರಲ್ಲಿ 1.8 ಶೇಕಡ ಮಂದಿಯಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿರಲಿಲ್ಲ. 81.79 ಮಂದಿ ಸೋಂಕಿನ ಸೌಮ್ಯ ಲಕ್ಷಣಗಳನ್ನು ಪ್ರದರ್ಶಿಸಿದ್ದರು.4.64 ಶೇಕಡ ಮಂದಿ ಸೋಂಕಿನಿಂದ ತೀವ್ರವಾಗಿ ಬಾಧಿತರಾಗಿದ್ದರು.

ಕೋವಿಡ್19 ರೋಗಲಕ್ಷಣಗಳನ್ನು ಪ್ರದರ್ಶಿಸಿದವರಲ್ಲಿ 12.3 ಶೇಕಡ ಮಂದಿ ಕೇವಲ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದರೆ,13.9 ಶೇಕಡ ಮಂದಿಗೆ ಲಸಿಕೆಯನ್ನು ಪಡೆದೇ ಇರಲಿಲ್ಲ. ಒಂದೇ ಡೋಸ್ ಲಸಿಕೆಯನ್ನು ಪಡೆದವರಲ್ಲಿ ಶೇ.2 ಮಂದಿ ಹಾಗೂ ಲಸಿಕೆಯನ್ನು ಪಡೆಯದ ಶೇ.3.3 ಮಂದಿಯಲ್ಲಿ ಕೊರೋನ ಸೋಂಕಿನಿಂದ ತೀವ್ರವಾಗಿ ಬಾಧಿತರಾಗಿದ್ದರು. ಇನ್ನು ಒಂದೇ ಡೋಸ್ ಲಸಿಕೆಯನ್ನು ಪಡೆದವರಲ್ಲಿ 0.7 ಶೇಕಡ ಹಾಗೂ ಲಸಿಕೆ ಪಡೆಯದ ಶೇ.1.7 ಸೋಂಕಿತರಿಗೆ ಕ್ಲಿನಿಕಲ್ ಆಕ್ಸಿಜನ್‌ನ ಅಗತ್ಯ ಬಿದ್ದಿತ್ತು.

             ಆದಾಗ್ಯೂ ಎರಡೂ ಡೋಸ್ ಲಸಿಕೆಯನ್ನು ಪಡೆದವರು ವೈರಸ್ ವಿರುದ್ಧ ಅಧಿಕ ಮಟ್ಟದ ರಕ್ಷಣೆಯನ್ನು ಪಡೆಯುತ್ತಾರೆಂದು ಅಧ್ಯಯನ ವರದಿ ತಿಳಿಸಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳನ್ನು 30 ದಿನಗಳ ಅಂತರದಲ್ಲಿ ನೀಡಿದಾಗ, ಲಸಿಕೆಯ ಪರಿಣಾಮಕಾರಿತ್ವವು ರೋಗಲಕ್ಷಣಸಹಿತವಾದ ಸೋಂಕಿತರರಲ್ಲಿ ಶೇ.28, ತೀವ್ರವಾದ ಅಥವಾ ಸೌಮ್ಯವಾದ ರೋಗಲಕ್ಷಣಗಳಿರುವವರಲ್ಲಿ ಶೇ.67 ಮತ್ತು ಪೂರಕ ಆಕ್ಸಿಜನ್ ಥೆರಪಿಯನ್ನು ಪಡೆದವರಲ್ಲಿ ಶೇ.76ರಷ್ಟಿತ್ತು ಎಂದು ಅಧ್ಯನ ವರದಿ ತಿಳಿಸಿದೆ.

           ಈ ಹಿಂದೆ ಸಾರ್ಸ್-ಕೋವ್-2 ಸೋಂಕಿನಿಂದ ಪೀಡಿತರಾದವರಲ್ಲಿ ಲಸಿಕೆಯ ಪರಿಣಾಮಕಾರಿತ್ವವು ಶೇ.93ರಷ್ಟಿದ್ದರೆ, ಸೌಮ್ಯ ಅಥವಾ ತೀವ್ರವಾಗಿ ಸೋಂಕಿನಿಂದ ಪೀಡಿತರಾದವರಲ್ಲಿ ಶೇ.73ರಷ್ಟಿತ್ತು. ಕೊರೋನದಿಂದ ಸಾವನ್ನಪ್ಪಿದವರೆಲ್ಲರೂ ಕೂಡಾ ಈ ಹಿಂದೆ ಸೋಂಕಿನಿಂದ ಬಾಧಿತರಾಗಿರಲಿಲ್ಲವೆಂದು ಅಧ್ಯಯನ ವರದಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries