ತಿರುವನಂತಪುರಂ: ರಾಜ್ಯದಲ್ಲಿ ಇಂದು 21,427 ಮಂದಿ ಜನರಿಗೆ ಕೋವಿಡ್ -19 ದೃಢಪಟ್ಟಿದೆ. ಮಲಪ್ಪುರಂ 3089, ಕೋಯಿಕ್ಕೋಡ್ 2821, ಎರ್ನಾಕುಳಂ 2636, ತ್ರಿಶೂರ್ 2307, ಪಾಲಕ್ಕಾಡ್ 1924, ಕಣ್ಣೂರು 1326, ಕೊಲ್ಲಂ 1311, ತಿರುವನಂತಪುರ 1163, ಕೊಟ್ಟಾಯಂ 1133, ಆಲಪ್ಪುಳ 1005, ಇಡುಕ್ಕಿ 773, ಪತ್ತನಂತಿಟ್ಟ 773, ಕಾಸರಗೋಡು 607 ಮತ್ತು ವಯನಾಡ್ 559 ಎಂಬಂತೆ ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,38,225 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ. 15.5 ಆಗಿದೆ. ರುಟೀನ್ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,98,23,377 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 25 ಗಂಟೆಗಳಲ್ಲಿ ಕೋವಿಡ್ -19 ನಿಂದ 179 ಮಂದಿ ಮೃತಪಟ್ಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 19,049 ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 108 ಮಂದಿ ರಾಜ್ಯದ ಹೊರಗಿಂದ ಬಂದವರು. 20,262 ಮಂದಿ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 971 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಮಲಪ್ಪುರಂ 2994, ಕೋಯಿಕ್ಕೋಡ್ 2794, ಎರ್ನಾಕುಲಂ 2591, ತ್ರಿಶೂರ್ 2291, ಪಾಲಕ್ಕಾಡ್ 1260, ಕಣ್ಣೂರು 1222, ಕೊಲ್ಲಂ 1303, ತಿರುವನಂತಪುರಂ 1100, ಕೊಟ್ಟಾಯಂ 1071, ಆಲಪ್ಪುಳ 985, ಇಡುಕ್ಕಿ 764, ಪತ್ತನಂತಿಟ್ಟ 743, ಕಾಸರಗೋಡು 590 ಮತ್ತು ವಯನಾಡ್ 554 ಎಂಬಂತೆ ಸಂಪರ್ಕದಿಂದ ಕೋವಿಡ್ ಬಾಧಿಸಿದೆ.
ಇಂದು 86 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 22, ಪಾಲಕ್ಕಾಡ್ 14, ಕಾಸರಗೋಡು 11, ಎರ್ನಾಕುಲಂ, ತ್ರಿಶೂರ್ 8, ಪತ್ತನಂತಿಟ್ಟ 7, ಕೊಟ್ಟಾಯಂ 6, ಕೊಲ್ಲಂ 5, ವಯನಾಡ್ 2, ತಿರುವನಂತಪುರಂ, ಅಲಪ್ಪುಳ ಮತ್ತು ಮಲಪ್ಪುರಂ 1 ಎಂಬಂತೆ ಸೋಂಕು ಬಾಧಿಸಲ್ಪಟ್ಟಿದೆ.
ಒಟ್ಟು 18,731 ಮಂದಿ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ತಿರುವನಂತಪುರಂ 782, ಕೊಲ್ಲಂ 293, ಪತ್ತನಂತಿಟ್ಟ 546, ಆಲಪ್ಪುಳ 1177, ಕೊಟ್ಟಾಯಂ 1226, ಇಡುಕ್ಕಿ 424, ಎರ್ನಾಕುಲಂ 2100, ತ್ರಿಶೂರ್ 2530, ಪಾಲಕ್ಕಾಡ್ 2200, ಮಲಪ್ಪುರಂ 2935, ಕೋಳಿಕ್ಕೋಡ್ 2207, ವಯನಾಡ್ 676, ಕಣ್ಣೂರು 1116 ಮತ್ತು ಕಾಸರಗೋಡು 519 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,77,683 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 35,48,196 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,98,630 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವರಲ್ಲಿ 4,70,771 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 27,859 ಮಂದಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದಾರೆ. 2225 ಮಂದಿಯನ್ನು ಹೊಸತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

