ತಿರುವನಂತಪುರಂ: ಅಕ್ಟೋಬರ್‍ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಪಿಎಸ್‍ಸಿ ಮುಂದೂಡಿದೆ. ಎಲ್.ಡಿ.ಸಿ ಮತ್ತು ಎಲ್.ಜಿ.ಎಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪಿಎಸ್‍ಸಿ ಪರೀಕ್ಷೆಗಳನ್ನು ನವೆಂಬರ್‍ಗೆ ಮುಂದೂಡಿದೆ.
ಅಕ್ಟೋಬರ್ 23 ಕ್ಕೆ ನಿಗದಿಯಾಗಿರುವ ಎಲ್ಡಿಸಿ ಪರೀಕ್ಷೆಗಳು ನವೆಂಬರ್ 20 ರಂದು ನಡೆಯಲಿವೆ. ಅಕ್ಟೋಬರ್ 30 ಕ್ಕೆ ನಿಗದಿಪಡಿಸಿದ ಲಾಸ್ಟ್ ಗ್ರೇಡ್ ಸರ್ವೆಂಟ್ ಪÀರೀಕ್ಷೆಗಳು ನವೆಂಬರ್ 27 ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಬದಲಾವಣೆಯ ಬೇಕಾಗಿರುವುದರಿಂದ ಪರೀಕ್ಷೆಗಳನ್ನು ಮರು ನಿಗದಿಪಡಿಸಲಾಗಿದೆ ಎಂದು ಪಿಎಸ್‍ಸಿ ತಿಳಿಸಿದೆ.

