ಕೊಚ್ಚಿ: ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಗೋರಕ್ಷಾ ಮತ್ತು ಗೋವಿಜ್ಞಾನ ರಥ ಯಾತ್ರೆ ಎರ್ನಾಕುಳಂನಲ್ಲಿ ಬುಧವಾರ ಆರಂಭವಾಗಿದೆ. ಗೋ ರಕ್ಷಣೆಯ ವೈಭವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಒಂದು ವರ್ಷ ಸಂಚರಿಸಲಿರುವ ರಥಯಾತ್ರೆಯನ್ನು ಆರಂಭಿಸಲಾಯಿತು.
ಮಾನವಕುಲದ ಪವಿತ್ರ ಮತ್ತು ಆರೋಗ್ಯಕರ ಜೀವನ ಮತ್ತು ಸುದೃಢ ಆರೋಗ್ಯಕ್ಕಾಗಿ ಗೋ ಕಾಳಜಿಯ ಅಗತ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವಿಶ್ವಹಿಂದ್ ಪರಿಷತ್ ರಾಜ್ಯಾದ್ಯಂತ ಗೋರಕ್ಷಾ ಗೋಯಾತ್ರೆಯನ್ನು ಆರಂಭಿಸಿದೆ. ಸಂಸದ ಸುರೇಶ್ ಗೋಪಿ ರಥಯಾತ್ರೆಯನ್ನು ಉದ್ಘಾಟಿಸಿದರು.
ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ವಿ.ಜಿ. ತಂಬಿ ಮಾತನಾಡಿ, ಒಂದು ವರ್ಷದೊಳಗೆ ರಾಜ್ಯದ ಎಲ್ಲ ಗ್ರಾಮಗಳಿಗೆ ರಥಯಾತ್ರೆಯ ಮೂಲಕ ಸಂದೇಶ ತಲುಪಲಿದೆ. ಈ ಮೂಲಕ ಗೋವಿನ ಮಹತ್ವದ ಬಗೆಗಿನ ಜಾಗೃತಿ, ಸುಸ್ಥಿರ ಸಮಾಜ ನಿರ್ಮಾಣದ ಪರಿಕಲ್ಪನೆಗೆ ನಾಂದಿಯಾಗಲಿದೆ ಎಮದರು.
ಯಾತ್ರೆ ಕಾಲೂರಿನ ಪಾವಕ್ಕುಳಂ ಮಹಾದೇವ ದೇವಸ್ಥಾನದಿಂದ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸಿ ಒಂದು ವರ್ಷದ ನಂತರ ಎರ್ನಾಕುಳಂನಲ್ಲಿ ಸಮಾರೋಪಗೊಳ್ಳಲಿದೆ.

