ತಿರುವನಂತಪುರಂ: ಸಾಂಪ್ರದಾಯಿಕ ಭೂ ಸರ್ವೇ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಭೂ ಸರ್ವೇಗೆ ಸಂಬಂಧಿಸಿ ದೂರು ನೀಡಿದವರು ಬಿಕ್ಕಟ್ಟಿನಲ್ಲಿದ್ದಾರೆ. ಆದರೆ ಇದೀಗ ಪರಿಹಾರ ನಿರ್ದೇಶನವೊಂದನ್ನು ಸರ್ಕಾರ ನೀಡಿದ್ದು, ಮುಂದಿನ 4 ವರ್ಷಗಳಲ್ಲಿ ಡಿಜಿಟಲ್ ಸರ್ವೇ ಪೂರ್ಣಗೊಳಿಸಿದ ಬಳಿಕವೇ ದಾಖಲೆಗಳನ್ನು ಸ್ವೀಕರಿಸಬಹುದೆಮದು ತಿಳಿಸಲಾಗಿದೆ. ಓಣಂ ಬಳಿಕ, ಕಂದಾಯ ಇಲಾಖೆ ಸಾಂಪ್ರದಾಯಿಕ ಸಮೀಕ್ಷೆಯನ್ನು ಬಿಟ್ಟು ಸಂಪೂರ್ಣವಾಗಿ ಡಿಜಿಟಲ್ ಮಾಡಲು ನಿರ್ಧರಿಸಿದೆ.
ಡಿಜಿಟಲ್ ಸಮೀಕ್ಷೆಯು ಕಂದಾಯ, ನೋಂದಣಿ ಮತ್ತು ಸರ್ವೆ ಇಲಾಖೆಗಳ ಅಡಿಯಲ್ಲಿ ಭೂ ದಾಖಲೆಗಳನ್ನು ಕ್ರೋಢೀಕರಿಸುವ ಗುರಿಯನ್ನು ಹೊಂದಿದೆ. ಕಂದಾಯ ಸಚಿವ ಕೆ ರಾಜನ್ ಅವರು ಡ್ರೋನ್, ರಾಡಾರ್ ಮತ್ತು ಜಿಪಿಎಸ್ ನಂತಹ ತಂತ್ರಜ್ಞಾನಗಳ ಸಹಾಯದಿಂದ ನಾಲ್ಕು ವರ್ಷಗಳಲ್ಲಿ ಭೂ ಸರ್ವೇ ಪೂರ್ಣಗೊಳಿಸಲಾಗುವುದು. ಮತ್ತು ಇದಕ್ಕಾಗಿ ಸರ್ಕಾರ 807.98 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಹೇಳಿರುವರು.
ಮೊದಲು ಸರ್ಕಾರಿ ಭೂಮಿಯನ್ನು ಮತ್ತು ಬಳಿಕ ಖಾಸಗಿ ಭೂಮಿಯನ್ನು ಅಳೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸರ್ವೇ ಮಾಡಿದ ಪ್ರದೇಶಗಳನ್ನು ಡಿಜಿಟಲ್ ಮೂಲಕವೂ ಸರ್ವೇ ಮಾಡಲಾಗುತ್ತದೆ. ಇದೇ ವೇಳೆ ಖಾಸಗಿ ವ್ಯಕ್ತಿಗಳು ಸರ್ವೇಗೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರುಗಳನ್ನು ಪರಿಹರಿಸಲು 4 ವರ್ಷಗಳವರೆಗೆ ಕಾಯಬೇಕಾಗುತ್ತದೆ.

