ತಿರುವನಂತಪುರ: ವಾರಾಂತ್ಯದ ಲಾಕ್‍ಡೌನ್ ನ್ನು ಭಾನುವಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.ಈ ಮೂಲಕ ವಿಧಾನಸಭೆಯಲ್ಲಿ ಸರ್ಕಾರ ಹೊಸ ನಿರ್ಬಂಧಗಳನ್ನು ಘೋಷಿಸಿತು. ಓಣಂ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ ಭಾನುವಾರಗಳಂದು ಯಾವುದೇ ಲಾಕ್‍ಡೌನ್ ಇರುವುದಿಲ್ಲ. ನಿಬರ್ಂಧಗಳನ್ನು ವಿಧಿಸಲು ಐಪಿಆರ್ ಅನ್ನು ಈಗ ಟಿಪಿಆರ್ ಜೊತೆಗೆ ಪರಿಗಣಿಸಲಾಗುವುದು. ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೊಸ ಲಾಕ್‍ಡೌನ್ ನೀತಿಯನ್ನು ವಿಧಾನಸಭೆಯಲ್ಲಿ ಘೋಷಿಸಿದರು.
ರೋಗಿಗಳ ಸಂಖ್ಯೆಯನ್ನು ಆಧರಿಸಿ ನಿರ್ಬಂಧಗಳನ್ನು ವಿಧಿಸಲಾಗುವುದು. ಒಂದು ಪ್ರದೇಶದಲ್ಲಿ ಸಾವಿರ ಜನರಿಗೆ ಧನಾತ್ಮಕ ಸಂಖ್ಯೆಯನ್ನು ನೋಡಿ ಮತ್ತು ಪ್ರತಿ ಪ್ರದೇಶದಲ್ಲಿ ಕೊರೋನಾ ಹರಡುವಿಕೆ ಪರಿಶೀಲಿಸಿ ನಿಯಂತ್ರಣ ಹೇರಲಾಗುವುದು. ಸಾವಿರದಲ್ಲಿ ಹತ್ತಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದರೆ, ಟ್ರಿಪಲ್ ಲಾಕ್‍ಡೌನ್ ವಿಧಿಸಲಾಗುತ್ತದೆ.
ಹೆಚ್ಚು ರೋಗಿಗಳು ಇರುವಲ್ಲಿ ಹೆಚ್ಚಿನ ನಿಯಂತ್ರಣ ಹೇರಲಾಗುತ್ತದೆ. ಕಡಿಮೆ ಇರುವ ಪ್ರದೇಶಗಳಲ್ಲಿ ವಿನಾಯ್ತಿ ನೀಡಲಾಗುವುದು. ವಿವಾಹ ಮತ್ತು ಮೃತಹೊಂದಿದ ಬಳಿಕದ ಕಾರ್ಯಕ್ರಮಗಳಿಗೆ ಗರಿಷ್ಠ 20 ಜನರು ಮಾತ್ರ ಭಾಗವಹಿಸಬೇಕು. ಪೂಜೆ-ಉತ್ಸವಗಳಂತಹ ಕಾರ್ಯಕ್ರಮಗಳಲ್ಲಿ 40 ಜನರಿಗೆ ಅವಕಾಶವಿದೆ. ವ್ಯಾಪಾರ ಮಳಿಗೆಗಳು ವಾರದಲ್ಲಿ ಆರು ದಿನಗಳು ತೆರೆದಿರುತ್ತವೆ. ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ.





