ತಿರುವನಂತಪುರ: ಕೊರೋನಾ ನಿಯಂತ್ರಣ ಮತ್ತು ರಕ್ಷಣಾತ್ಮಕ ಚಟುವಟಿಕೆಯಲ್ಲಿ ಕೇರಳ ಗಂಭೀರ ಲೋಪ ಎಸಗಿದೆ ಎಂದು ಕೇಂದ್ರ ತಂಡ ಹೇಳಿದೆ. ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕನಗ್ಯೆದ ಕೇಂದ್ರ ತಂಡ ತನ್ನ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ಅನುಸರಿಸಲು ಕೇರಳ ವಿಫಲವಾಗಿದೆ ಎಂದು ವರದಿಯಾಗಿದೆ.
ಕೇರಳದಲ್ಲಿ ಕೊರೊನಾ ಪರೀಕ್ಷೆಗಳು ಪರಿಣಾಮಕಾರಿಯಾಗಿಲ್ಲ.
ಜಾಹೀರಾತು
ಕೇಂದ್ರ ಸರ್ಕಾರದ ನಿರ್ದೇಶನದಂತೆ ಯಾವುದೇ ಕಂಟೈನ್‌ಮೆಂಟ್ ವಲಯಗಳಿಲ್ಲ. ಮನೆಯ ಮೇಲ್ವಿಚಾರಣೆ ಪರಿಣಾಮಕಾರಿಯಾಗಿಲ್ಲ. ಸಂಪರ್ಕ ಪಟ್ಟಿಯನ್ನು ಸಿದ್ಧಪಡಿಸುವಲ್ಲಿಯೂ ಕೇರಳವು ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ವರದಿಯು ಹೇಳುತ್ತದೆ. ತಂಡವು ಪರಿಶೀಲನಾ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ರವಾನಿಸುತ್ತದೆ.




