ಕೊಚ್ಚಿ: ರಾಜ್ಯದ 60 ವರ್ಷ ಮೇಲ್ಪಟ್ಟ ಎಲ್ಲ ಪರಿಶಿಷ್ಟ ಜಾತಿಯವರಿಗೆ ಮುಖ್ಯಮಂತ್ರಿಯವರ ಓಣಂ ಉಡುಗೊರೆ ಘೋಷಿಸಲಾಗಿದೆ. ರಾಜ್ಯ ಸರ್ಕಾರ 1,000 ರೂ.ನೀಡಲಿದೆ. ಇದಕ್ಕಾಗಿ `5.76 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಅರ್ಹರಿಗೆ ಆರ್ಥಿಕ ನೆರವು ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೆ ರಾಧಾಕೃಷ್ಣನ್ ಸ್ಪಷ್ಟಪಡಿಸಿರುವರು.
"60 ವರ್ಷ ಮೇಲ್ಪಟ್ಟ ಎಲ್ಲ ಎಸ್‍ಟಿ ಗಳು ತಲಾ 1000 ರೂಗಳನ್ನು ಓಣಂ ಉಡುಗೊರೆಯಾಗಿ ಪಡೆಯಲಿದ್ದಾರೆ. ಈ ಬಾರಿ ಮುಖ್ಯಮಂತ್ರಿಯವರ ಓಣಂ ಉಡುಗೊರೆಯನ್ನು 57,655 ಎಸ್‍ಟಿಗಳಿಗೆ ನೀಡಲಾಗುತ್ತದೆ.
ಪರಿಶಿಷ್ಟ ಪಂಗಡದವರು ಸಮಾಜದ ಮುಖ್ಯವಾಹಿನಿಯನ್ನು ಇನ್ನೂ ತಲುಪಿಲ್ಲ ಮತ್ತು ಸಮಾಜದ ವಿಶೇಷ ಕಾಳಜಿಗೆ ಅರ್ಹರಾಗಿದ್ದಾರೆ. ಈ ಹಬ್ಬಗಳ ಸಮಯದಲ್ಲಿ ಆ ವಿಭಾಗದ ಹಿರಿಯ ನಾಗರಿಕರ ಕಲ್ಯಾಣವನ್ನು ಖಚಿತಪಡಿಸುವುದು ಸರ್ಕಾರದ ಉದ್ದೇಶ ಎಮದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರವು ಎಲ್ಲಾ ಕುಟುಂಬಗಳಿಗೆ ಓಣಂ ಕಿಟ್ ಮತ್ತು ಕಲ್ಯಾಣ ಪಿಂಚಣಿಗೆ ಅರ್ಹರಿಗೆ ಎರಡು ತಿಂಗಳ ಪಿಂಚಣಿ ನೀಡುತ್ತಿದ್ದು, ಬಿಕ್ಕಟ್ಟುಗಳ ನಡುವೆ ಸಮೃದ್ಧಿಯ ಖುಷಿಯನ್ನು ಹುಟ್ಟುಹಾಕುವ ಓಣಂ ಆಚರಣೆಗಳು ವಿಫಲವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಇಂತಹ ಉಪಕ್ರಮಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಇದರ ಜೊತೆಯಲ್ಲಿ, ರಾಜ್ಯ ಸರ್ಕಾರವು ಇತ್ತೀಚೆಗೆ ಕಲ್ಯಾಣ ಪಿಂಚಣಿ ವ್ಯಾಪ್ತಿಗೆ ಒಳಪಡದ ಮತ್ತು ಅರ್ಹತೆ ಇಲ್ಲದವರಿಗೆ 1,000 ರೂಪಾಯಿಗಳ ವಿಶೇಷ ಆರ್ಥಿಕ ಸಹಾಯವನ್ನು ಘೋಷಿಸಿದೆ ಎಂದು ಸಚಿವರು ಹೇಳಿದರು.

