ತಿರುವನಂತಪುರಂ: ರಾಜ್ಯ ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ನವ ಉದಾರವಾದಿ ಯುಗದಲ್ಲಿ ಮಲಯಾಳಂ ವಾಣಿಜ್ಯ ಸಿನಿಮಾ ಸಿದ್ಧಾಂತದ ಕುರಿತು ಕೇರಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವರು. ಜೆರೋಮ್ ಇಂಗ್ಲಿಷ್ ಸಾಹಿತ್ಯದಲ್ಲಿ ಸಂಶೋಧನೆ ಮಾಡಿದವರು.
ಈ ಬಗ್ಗೆ ಜೆರೋಮ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಂಶೋಧನಾ ಪ್ರಬಂಧವು ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ತಮ್ಮ ನಿರಂತರ ಹೋರಾಟವನ್ನು ಮುಂದುವರಿಸುವ ವಿಶ್ವದಾದ್ಯಂತದ ಯುವಜನರಿಗೆ ಸಮರ್ಪಿಸಲಾಗಿದೆ ಎಂದು ಅವರು ಹೇಳಿದರು.
ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿಪಿ ಅಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿಂತಾ ಜೆರೋಮ್ ಸಂಶೋಧನೆ ನಡೆಸಿದ್ದಾರೆ.

