ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ವೇಳೆ ಮಾಸ್ಕ್ ಗಳಲ್ಲಿ ಅತ್ಯಂತ ಸುರಕ್ಷಿತ ಎಂದು ನಂಬಲಾಗುವ ಎನ್ 95 ಮಾಸ್ಕ್ ಗಳ ಬಳಕೆ ವೇಳೆಯೂ ಜಾಗರೂಕತೆ ಬೇಕು ಎಂದು ಆರೋಗ್ಯ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ.
ಸತತವಾಗಿ ಅನೇಕ ದಿನಗಳ ಕಾಲ ಒಂದೇ ಮಾಸ್ಕ್ ಧರಿಸುವುದು ರೋಗ ಹೆಚ್ಚಳಕ್ಕೆ ಕಾರಣವಾದೀತು. ಗರಿಷ್ಠ 5 ಬಾರಿ ಮಾತ್ರ ಎನ್.95 ಮಾಸ್ಕ್ ಪುನರ್ ಬಳಕೆ ನಡೆಸಬಹುದು ಎಂದು7 ಅಂತಾರಾuಟಿಜeಜಿiಟಿeಜ್ಟ್ರಯ ಮಟ್ಟದ ಆರೋಗ್ಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಅದೂ ಸತತವಾಗಿ ಏಕಕಾಲಕ್ಕೆ 5 ಬಾರಿ ಬಳಸಕೂಡದು. ಒಂದು ಬಾರಿ ಬಳಸಿದ ಮೇಲೆ 72 ತಾಸುಗಳ ನಂತರ ಎನ್ 95 ಮಾಸ್ಕ್ ಬಳಸಬೇಕು. ಕೋವಿಡ್ ವೈರಸ್ ಗಳು ಗರಿಷ್ಠ 72 ತಾಸುಗಳ ಕಾಲ ಬದುಕುತ್ತವೆ ಎಂಬ ಗಣನೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಬಳಸಿದ ಮಾಸ್ಕ್ ಗಳನ್ನು ಒಂದೇ ಕಡೆ ಇರಿಸಕೂಡದು. ತೊಳೆದ ನಂತರ ಸೂಕ್ತ ಗಾಳಿಯಾಡುವ ಕಡೆ ಯಾ ಗಾಳಿ ಸಂಚಾರವಿರುವ ಲಕೋಟೆಗಳಲ್ಲಿ ಪ್ರತ್ಯೇಕವಾಗಿ ಒಣಗಿಸಬೇಕು. ಈ ನಿಟ್ಟಿನಲ್ಲಿ ಒಬ್ಬರಲ್ಲಿ ಕನಿಷ್ಠ 5 ಮಾಸ್ಕ್ ಗಳು ವಾಯುಸಂಚಾರವಿರುವ( ಒಂದರಿಂದ 5 ವರೆಗೆ ಲೇಬಲ್ ನಡೆಸಿರುವ) 5 ಕಾಗದದ ಬ್ಯಾಗ್ ಗಳು ಇರಬೇಕು. ಮೊದಲ ದಿನ ಬಳಸಿದ ಮಾಸ್ಕನ್ನು ಒಂದು ಎಂದು ಬರೆದು ಕಾಗದದ ಬ್ಯಾಗ್ ನಲ್ಲಿ ಹಾಕಿರಿಸಬೇಕು. 2 ನೇ ದಿನ ಬಳಸಿದ ಮಾಸ್ಕನ್ನು 2 ಎಂದು ಬರೆದು 2ನೇ ಬ್ಯಾಗ್ ನಲ್ಲಿ ಹಾಕಬೇಕು. ಹೀಗೆ 5 ದಿನ ನಡೆಸಬೇಕು. ಈ ರೀತಿ ನಡೆಸಿದ ಮೇಲೆ 1ನೇ ಮಾಸ್ಕನ್ನು ಮರಳಿ ಬಳಸಬಹುದು. ಪ್ರತಿ ಮಾಸ್ಕ್ 5 ಬಾರಿ ಮಾತ್ರ ಬಳಸಬೇಕು. ಮಾಸ್ಕ್ ನಲ್ಲಿ ಶರೀರದ ದ್ರವಾಂಶ ತಗುಲಿದರೆ ಮತ್ತೆ ಬಳಸಕೂಡದು.
ಅವರವರ ಮುಖಕ್ಕೆ ಸೂಕ್ತ ವಾಗದೇ ಇರುವ ಎನ್ 95 ಮಾಸ್ಕ್ ಧರಿಸಕೂಡದು. ಗಡ್ಡದಾರಿಗಳಲ್ಲಿ ಇದು ಸುರಕ್ಷಿರತವಲ್ಲ. ಎನ್ 95 ಮಾಸ್ಕ್ ಮುಖದಲ್ಲಿ ಸೀಲ್ ನಡೆಸಿರುವ ರೀತಿ ಧರಿಸಬೇಕು. ಎನ್ 95 ಮಾಸ್ಕನ್ನು ಸಾಬೂನು ದ್ರಾವಣದಲ್ಲಿ ತೊಳೆಯಕೂಡದು, ಬಿಸಿಲಲ್ಲಿ ಒಣಗಿಸಕೂಡದು. ಹೀಗೆ ಮಾಡಿದರೆ ಈ ಮಾಸ್ಕ್ ನಲ್ಲಿರುವ ಇಲೆಕ್ಟ್ರಾ ಸ್ಟಾಟಿಕ್ ಚಾರ್ಜ್ ನಾಶವಾಗುತ್ತದೆ. ಮರಳಿ ಬಳಸುವ ವೇಳೆ ಉಸಿರಾಟಕ್ಕೆ ತೊಡಕಾದಲ್ಲಿ ಆ ಮಾಸ್ಕ್ ಧರಿಸಕೂಡದು.
ಒಬ್ಬರು ಬಳಸಿದ ಮಾಸ್ಕನ್ನು ಮತ್ತೊಬ್ಬರು ಬಳಸಕೂಡದು. ಕೋವಿಡ್ ಕಟ್ಟುನಿಟ್ಟು ಪಾಲಿಸಿರುವ ಸರ್ಟಿಫೈಡ್ ಮಾಸ್ಕ್ ಮಾತ್ರ ಉದ್ದೇಶಿತ ಪರಿಣಾಮ ನೀಡಬಲ್ಲುದು.
ಡಬ್ಬಲ್ ಮಾಸ್ಕಿಂಗ್ ಅಭ್ಯಾಸವಾಗಿಸೋಣ
ಎನ್ 95 ಮಾಸ್ಕ್ ಗಳು ಲಭಿಸದೇ ಇದ್ದಲ್ಲಿ ಸರ್ಜಿಕಲ್ ಮಾಸ್ಕ್ ಗಳ ಮೇಲ್ಗಡೆ ಸಾಧಾರಣ ಬಟ್ಟೆಯ ಮಾಸ್ಕ್ ಬಳಸುವುದು ಸೂಕ್ತ ಎಂದು ಖಚಿತವಾಗಿದೆ. ಸರ್ಜಿಕಲ್ ಮಾಸ್ಕ್ ಗಳು ಮುಚ್ಚುಗಡೆ ನಡೆಸದೇ ಇರುವ ಮುಖದ ಭಾಗಗಳನ್ನು ಉಳಿದ ಮಾಸ್ಕ್ ಮರೆಮಾಡುತ್ತದೆ ಎಂಬುದು ಡಬ್ಬಲ್ ಮಾಸ್ಕಿಂಗ್ ನ ಪ್ರಯೋಜನ. ಎರಡು ಮಾಸ್ಕ್ ಬಳಸುವುದರಿಂದ ಮುಖದಲ್ಲಿ ಇವು ಫಿಟ್ ಆಗಿರುತ್ತವೆ ಎಂಬುದು ಪ್ರಯೋಜನಕಾರಿ. ಈ ಮೂಲಕ ಎರಡೂ ಬದಿಗಳಿಮದ ವಾಯುಸಂಚಾರ ನಡೆಯುವುದನ್ನು ತಡೆಯಬಹುದಾಗಿದೆ. ಎರಡು ಸರ್ಜಿಕಲ್ ಮಾಸ್ಕ್ ಏಕಕಾಲಕ್ಕೆ ಬಳಸಕೂಡದು.





