ಮಂಜೇಶ್ವರ: ಹೈಕೋರ್ಟ್ ಆಜ್ಞೆಯನ್ನು ಧಿಕ್ಕರಿಸಿ ಕೇರಳದವರನ್ನು ತಡೆಯುವ ಕರ್ನಾಟಕದ ಗಡಿ ನೀತಿಯ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ತಲಪಾಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದುಮ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಂಬು ಉದ್ಘಾಟಿಸಿದರು. ಅರವಿಂದ ಸಿ ಅಧ್ಯಕ್ಷತೆ ವಹಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ಆರ್ ಜಯಾನಂದ, ಮುಖಂಡರಾದ ಶಂಕರ್ ರೈ ಮಾಸ್ತರ್, ಭಾರತಿ ಸುಳ್ಯಮೆ, ಡಿ. ಸುಬ್ಬಣ್ಣ ಆಳ್ವ ಮಾತನಾಡಿದರು. ಕೆ.ಕಮಲಾಕ್ಷ, ಡಿ. ಕಮಲಾಕ್ಷ, ಶ್ರೀನಿವಾಸ ಭಂಡಾರಿ, ಅಬ್ದುಲ್ಲ, ಶ್ರೀಧರ ಕುಂಜತ್ತೂರು, ಗೀತಾ ಸಾಮಾನಿ, ನವೀನ್ ತಚ್ಚಿರೆ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು. ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿ, ಡಿ. ಬೂಬ ವಂದಿಸಿದರು.





