ಕಾಸರಗೋಡು : ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿ ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಆರೋಗ್ಯ ಸಂಬಂಧಿತ ಕಷ್ಟಗಳ ಬಗ್ಗೆ ವಿವರಿಸಿ ಸಚಿವರಿಗೆ ಮನದಟ್ಟು ಮಾಡಿದರು. ಕೋವಿಡ್ ಮೊದಲ ಅಲೆಯ ಸಂಧರ್ಭದಲ್ಲಿ ಕರ್ನಾಟಕ ಗಡಿ ಬಂದು ಮಾಡಿದ ಕಾರಣ 22 ಜನರು ಮಂಗಳೂರಿನ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ತೆರಲಲು ಸಾಧ್ಯವಾಗದೆ ಗಡಿಯಲ್ಲೇ ಮೃತಪಟ್ಟಿರುವುದು ಸಹ ಉಲ್ಲೆಖಿಸಿರುವ ಸಂಸದರು ಕಾಸರಗೋಡು ಜಿಲ್ಲೆಯಲ್ಲಿ ಸರಿಯಾದ ಸುಸ್ಸಜ್ಜಿತ ಆಸ್ಪತ್ರೆಗಳು ಇಲ್ಲದಿರುವುದನ್ನು ಸಹ ಕೇಂದ್ರ ಆರೋಗ್ಯ ಇಲಾಖೆಯ ಗಮನಕ್ಕೆ ತಂದರು. ಕಾಸರಗೋಡಿನಲ್ಲಿ ಶೀಘ್ರ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಮಂತ್ರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.





