ಬದಿಯಡ್ಕ: ಯೂತ್ ಕಾಂಗ್ರೆಸ್ ಹಾಗೂ ಮಂಡಲ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಸೋಮವಾರ ವಿವಿಧ ಕೇಂದ್ರಗಳಲ್ಲಿ ಪತಾಕೆ ದಿನವಾಗಿ ಆಚರಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿ, ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕಗಳೊಂದಿಗೆ ತೇರ್ಗಡೆಗೊಂಡ ಬದಿಯಡ್ಕ ಪಂಚಾಯತಿನ ವಿದ್ಯಾರ್ಥಿಗಳ ವಾರ್ಡುಗಳಲ್ಲಿ ಮನೆ-ಮನೆ ಭೇಟಿ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು. ಬದಿಯಡ್ಕ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ, ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷ ಶಾಫಿ ಪಯ್ಯಲಡ್ಕ, ಯುವ ಕಾಂಗ್ರೆಸ್ ನೇತಾರ ನಿರಂಜನ್ ರೈ ಪೆರಡಾಲ, ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಯುಡಿಎಫ್ ನೇತಾರ ತಾಜುದ್ದಿನ್ ಕನ್ಯಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.





