ಕಾಸರಗೋಡು: ಬಿಲ್ಲವ ಸೇವಾ ಸಂಘ, ಕರಂದಕ್ಕಾಡು, ಕಾಸರಗೋಡು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167 ನೇ ಜನ್ಮದಿನವನ್ನು ಸಂಘದ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.
ಸರ್ಕಾರದ ಕೋವಿಡ್ ಮಾನದಂಡ ಪಾಳಿಸಿಕೊಂಡು ಕಾರ್ಯಕ್ರಮ ನಡೆಯಿತು. ಅಡ್ಕತ್ತಬೈಲ್ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಅಚ9ಕ ಗುರು ಪ್ರಸಾದ್ ಶಾಂತಿ ಇವರ ಪೌರೋಹಿತ್ಯದಲ್ಲಿ ಈ ಕಾಯ9ಕ್ರಮ ನಡೆಯಿತು. ಸಂಘದ ಅಧ್ಯಕ್ಷ ಕೆ. ಕೇಶವ ಧ್ವಜಾರೋಹಣಗೈದರು. ಕಾಯ9ಕ್ರಮದ ಅಂಗವಾಗಿ ಶ್ರೀ ಮಹಾಗಣಪತಿ ಹೋಮ, ಮಧ್ಯಾಹ್ನ ಶ್ರೀ ನಾರಾಯಣ ಗುರುಗಳಿಗೆ ಮಹಾ ಪೂಜೆ ,ಪ್ರಸಾದ ವಿತರಣೆ ನಡೆಯಿತು. ಬಿಲ್ಲವ ಮಹಿಳಾ ಸಂಘದ ವತಿಯಿಂದ ಭಜನಾ ಕಾಯ9ಕ್ರಮ ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಎ.ಕೇಶವ, ಮಾಜಿ ಅಧ್ಯಕ್ಷ ಚಂದ್ರಶೇಖರ ಕೊರಕೋಡು, ರಘು ಮೀಪುಗುರಿ, ಕಮಲಾಕ್ಷ ಸೂಲು9, ಜಯಶೀಲ, ಸುಕೀತಿ9, ಶಮ್ಮಿ ಕುಮಾರ್, ಜಯಂತ ಮಹಿಳಾ ಸಂಘದ ನಿಕಟಪೂವ9 ಅಧ್ಯಕ್ಷೆ ಶಶಿ ಮಣಿ ಉಪಸ್ಥಿತರಿದ್ದರು.




