ಕುಂಬಳೆ: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ರಾಮನಾಥ ದೇವಸ್ಥಾನದ ಜೊತೆ ಕಾರ್ಯದರ್ಶಿ, ಸಂಸ್ಥೆಯ ಸಂಚಾಲಕ ಹರೀಶ್ಚಂದ್ರ ಸೂರ್ಲು ಅವರು ಧ್ವಜಾರೋಹಣಗೈದರು. ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದಭರ್Àದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಂಗವಾಗಿ 1947 ರಲ್ಲಿ ಜನಿಸಿದ 75 ಮಂದಿಯನ್ನು ಸಮ್ಮಾನಿಸುವುದಾಗಿ ಈ ಸಂದರ್ಭದಲ್ಲಿ ಪ್ರ`Áನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಘೋಷಿಸಿದರು. 'ನಮ್ಮ ನಡಿಗೆ 75 ಹಿರಿಯರ ಮನೆಗೆ' ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.





